(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಸೆ.10. ತನ್ನ ಪತ್ನಿ ಬೇರೊಬ್ಬನ ಜೊತೆ ಬೆಡ್ ರೂಮ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಕೋಪಗೊಂಡ ಪತಿಯು ಪತ್ನಿಯನ್ನು ಕತ್ತಿಯಿಂದ ಕಡಿದು ತಲೆಯನ್ನು ತೆಗೆದುಕೊಂಡು ಸುಮಾರು 20 ಕಿ.ಮೀ. ದೂರದ ಪೊಲೀಸ್ ಠಾಣೆಗೆ ಶರಣಾದ ಘಟನೆ ಭಾನುವಾರದಂದು ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರ ಸಮೀಪದ ಶಿವನಿ ನಿವಾಸಿ ಸತೀಶ್ ಕೊಲೆ ಆರೋಪಿ. ಮಾಂಸದ ಅಂಗಡಿ ನಡೆಸುತ್ತಿದ್ದ ಆರೋಪಿ ಸತೀಶ್ ರೂಪಾಳನ್ನು ಪ್ರೀತಿಸಿ ಮದುವೆಯಾಗಿದ್ದನು. ಇತ್ತೀಚೆಗೆ ರೂಪಾ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಇದೇ ವಿಚಾರದಲ್ಲಿ ಹಲವು ಬಾರಿ ದಂಪತಿಯ ನಡುವೆ ಜಗಳ ನಡೆದಿತ್ತೆನ್ನಲಾಗಿದೆ. ರವಿವಾರ ರಾತ್ರಿ ಸತೀಶ್ ಅಂಗಡಿಯಿಂದ ಮನೆಗೆ ಬಂದಾಗ ಅನ್ಯ ಪುರುಷನ ಜೊತೆ ರೂಪಾ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದು, ಕೋಪಗೊಂಡ ಸತೀಶ್ ಆಕೆಯ ತಲೆಯನ್ನು ಕತ್ತರಿಸಿ ಚೀಲವೊಂದರಲ್ಲಿ ಹಾಕಿಕೊಂಡು 20 ಕಿ.ಮೀ. ದೂರದ ಅಜ್ಜಂಪುರ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.