ಹೆಜಮಾಡಿ ಬೀಚ್ ಗೆ ಹರಿದು ಬಂದ ರಾಶಿ ರಾಶಿ ಸಿಲ್ವರ್ ಮೀನುಗಳು ► ಪುಕ್ಕಟೆ ಮೀನಿಗಾಗಿ ಊರ ಜಾತ್ರೆಯಂತಾದ ಉಡುಪಿಯ ಕಡಲ ಕಿನಾರೆ

(ನ್ಯೂಸ್ ಕಡಬ) newskadaba.com ಪಡುಬಿದ್ರೆ, ಸೆ.06. ಹೆಜಮಾಡಿ ಕೋಡಿಯಲ್ಲಿ ಬುಧವಾರದಂದು ಮೀನುಗಾರಿಕೆ ನಡೆಸುತ್ತಿದ್ದ ವೇಳೆ ರಾಶಿ ರಾಶಿ ಸಿಲ್ವರ್ ಫಿಶ್ (ಬೊಳೆಂಜರ್ ಮೀನು) ಕಡಲ ಕಿನಾರೆಯಲ್ಲಿ ಬಂದಿದ್ದರಿಂದ ಊರವರಿಗೆ ಮೀನಿನ ಸುಗ್ಗಿ ಉಂಟಾಗಿದೆ.

ಹೆಜಮಾಡಿ ಕೋಡಿಯ ಎಲ್ಲೆಡೆ ಸಿಲ್ವರ್ ಮೀನುಗಳು ರಾಶಿಯಾಗಿ ದಡ ಸೇರುತ್ತಿರುವುದು ಕಂಡುಬಂದಿದ್ದು, ಆಸುಪಾಸಿನ ಊರಿನವರು ಪುಕ್ಕಟೆ ಮೀನು ಪಡೆದುಕೊಂಡು ಹೋಗುತಿದ್ದಾರೆ. ಬುಧವಾರ ಬೆಳಗ್ಗೆಯಿಂದ ಮೀನುಗಾರಿಕೆಗೆ ಬಲೆ ಬೀಸಲು ಆರಂಭಿಸುತಿದ್ದಂತೆಯೇ ರಾಶಿರಾಸಿ ಮೀನುಗಳು ದಡಸೇರಿದೆ. ಸುದ್ದಿ ತಿಳಿದ ಪಡುಬಿದ್ರಿ, ಹೆಜಮಾಡಿ, ಎರ್ಮಾಳು, ಫಲಿಮಾರು, ಮುಲ್ಕಿ ಪರಿಸರದ ಮೀನುಪ್ರಿಯರು ಆಗಮಿಸಿ ಪುಕ್ಕಟೆ ಮೀನನ್ನು ಕೊಂಡೊಯ್ದರು.

Also Read  ರಾಜ್ಯಪಾಲರ ನಿರ್ಧಾರದ ವಿರುದ್ದ ಸಿಡಿದೆದ್ದ ಕಾಂಗ್ರೆಸ್ - ಆ. 19ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ

error: Content is protected !!
Scroll to Top