ಬಲ್ಯ: ಮದುವೆಯಾಗದ ಬಗ್ಗೆ ಮನನೊಂದ ವ್ಯಕ್ತಿ ► ನೇಣುಬಿಗಿದು ಆತ್ಮಹತ್ಯೆ



(ನ್ಯೂಸ್ ಕಡಬ) newskadaba.com ಕಡಬ, ಸೆ.04. ಮದುವೆಯಾಗದೆ ಮನನೊಂದ ವ್ಯಕ್ತಿಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಠಾಣಾ ವ್ಯಾಪ್ತಿಯ ಬಲ್ಯದಲ್ಲಿ ಮಂಗಳವಾರದಂದು ನಡೆದಿದೆ.







ಆತ್ಮಹತ್ಯೆ ಮಾಡಿಕೊಂಡವರನ್ನು ಬಲ್ಯದ ಹೊಸ್ಮಠ ನಿವಾಸಿ ಅಣ್ಣು ಗೌಡ ಎಂಬವರ ಪುತ್ರ ಜಯಾನಂದ ಗೌಡ(43) ಎಂದು ಗುರುತಿಸಲಾಗಿದೆ. ವಿವಾಹವಾಗದೆ ಮನನೊಂದು ವಿಪರೀತ ಮದ್ಯ ಸೇವನೆ ಮಾಡಿದ ಈತ ತನ್ನ ತಾಯಿ ಹಾಗೂ ತಂಗಿಯನ್ನು ಮನೆಯಿಂದ ಹೊರಹಾಕಿ ಮನೆಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಕಡಬ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






error: Content is protected !!
Scroll to Top