ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ► ಕಡಬ ಕ್ನಾನಾಯ ಜ್ಯೊತಿ ಶಾಲೆಯ ಕು|ಪ್ರಣಮ್ಯ ಪಿ.ರಾವ್ ರಾಜ್ಯ ಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಸೆ.02. ಮಂಗಳೂರಿನ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ 2018-19 ರ 26-30 ಕೆ.ಜಿ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಕು| ಪ್ರಣಮ್ಯ ಪಿ.ರಾವ್ ರವರು ಪ್ರಥಮ ಸ್ಥಾನ ಪಡೆದು ಗದಗನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಇವರು ಸಂಗೀತ ಹಾಗೂ ಭರತ ನಾಟ್ಯದಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ. ಇವರು ಕುಟ್ರುಪ್ಪಾಡಿ ಪುತ್ರಬೈಲು ಪ್ರಸನ್ನ ಕುಮಾರ್ ಎಂ.ಎಸ್. ಮತ್ತು ಶಿಕ್ಷಕಿ ಶ್ರೀಲತಾ ದಂಪತಿ ಪುತ್ರಿಯಾಗಿರುತ್ತಾಳೆ. ಇವರಿಗೆ ಕರಾಟೆ ಶಿಕ್ಷಕರಾದ ಯಾದವ ಬೀರಂತಡ್ಕ ಇವರು ತರಬೇತಿ ನೀಡುತ್ತಿದ್ದಾರೆ. ಇವರನ್ನು ಶಾಲಾ ಮುಖ್ಯ ಗುರುಗಳಾದ ಫಾ| ದಿಪು ಇರಪುರತ್ತ್, ಸಂಚಾಲಕರಾದ ಫಾ| ಮನು ಮತ್ತು ಶಾಲಾ ಶಿಕ್ಷಕ-ಶಿಕ್ಷಕೇತರ ವೃಂದದವರು ಅಭಿನಂದಿಸಿರುತ್ತಾರೆ.

Also Read  ಕಡಬ: ಮುಸ್ಲಿಂ ಧರ್ಮದ ಅವಹೇಳನ ಪ್ರಕರಣ ► ಆರೋಪಿಯ ಬಂಧನಕ್ಕೆ ಭಾನುವಾರ ಮಧ್ಯಾಹ್ನದ ಗಡುವು

error: Content is protected !!
Scroll to Top