ಕುಮಾರಧಾರ ನದಿಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಆಲಂಕಾರು, ಆ.19. ಅಪರಿಚಿತ ಗಂಡಸಿನ ಮೃತ ದೇಹವೊಂದು ಕುಮಾರಧಾರ ನದಿಯ ನೆರೆ ನೀರಿನಲ್ಲಿ ಕೊಚ್ಚಿ ಬಂದಿದ್ದು, ಆದಿತ್ಯವಾರ ಸಂಜೆ ಆರಲಂಕಾರಿನಲ್ಲಿ ಪತ್ತೆಯಾಗಿದೆ.

ಆಲಂಕಾರು ಗ್ರಾಮದ ಪಜ್ಜಡ್ಕ ನಿವಾಸಿ ಈಶ್ವರ ಗೌಡ ಎಂಬವರ ತೋಟದ ಬದಿಯಲ್ಲಿ ಕುಮಾರಧಾರ ನದಿಯಲ್ಲಿ ಸುಮಾರು 50 ವಯಸ್ಸಿನ ಗಂಡಸಿನ ಮೃತದೇಹವೊಂದು ಪತ್ತೆಯಾಗಿದೆ. ಮೃತ ದೇಹದಲ್ಲಿ ಯಾವುದೇ ಬಟ್ಟೆ ಬರೆಗಳು ಇಲ್ಲದಿದ್ದು ಶವವು ಗುರುತು ಹಿಡಿಯಲಾಗದ ರೀತಿಯಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ. ಸುಮಾರು ನಾಲ್ಕು ಅಥವಾ ಐದು ದಿನದ ಹಿಂದೆ ಸಾವನ್ನಪ್ಪಿರ ಬಹುದೆಂದು ಅಂದಾಜಿಸಲಾಗಿದೆ.
ಆಲಂಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧಾಕರ ಪೂಜಾರಿ ಕಲ್ಲೇರಿ ನೀಡಿರುವ ದೂರಿನಂತೆ ಕಡಬ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಕಡಬ: ಸರಸ್ವತೀ ವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘ ರಚನೆ

ಶವವನ್ನು ನೀರಿನಿಂದ ಮೇಲೆತ್ತಿ ಕಡಬ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಜರು ನಡೆಸಿ ಮತ್ತೆ ಆಲಂಕಾರು ಗ್ರಾಮ ಪಂಚಾಯತ್‍ನ ಸ್ಮಶಾನದ ಬಳಿ ದಫನ ಮಾಡಲಾಯಿತು. ಶವವನ್ನು ಮೇಲೆತ್ತಲು ಸ್ಥಳೀಯರಾದ ಕೇಶವ ಗೌಡ ಪಲ್ಲತ್ತಡ್ಕ, ಮಲ್ಲೇಶ್ ಎನ್. ನಗ್ರಿ, ದಾಮು ನಾಡ್ತಿಲ, ರವಿ ಕೊಂಡಾಡಿ, ಶಿವಪ್ರಸಾದ್ ಪೊಸೋಣಿ ಸಹಕರಿಸಿದರು.

error: Content is protected !!
Scroll to Top