(ನ್ಯೂಸ್ ಕಡಬ) newskadaba.com ಕಡಬ, ಆ.10. ಕಳೆದೆರಡು ದಿನಗಳಿಂದ ಮುಳುಗಡೆಗೊಂಡು ಸಂಚಾರಕ್ಕೆ ತಡೆಯಾಗಿದ್ದ ಹೊಸ್ಮಠ ಮುಳುಗು ಸೇತುವೆಯ ಮೇಲಿನ ನೆರೆ ನೀರು ಇಳಿಕೆಯಾಗಿದ್ದು, ಸಂಚಾರ ಪುನರಾರಂಭಗೊಂಡಿದೆ.
ಶುಕ್ರವಾರ ಬೆಳಿಗ್ಗೆ ಸೇತುವೆಯ ಮೇಲೆ ನೀರಿನ ಮಟ್ಟ ಕಡಿಮೆಯಾಗಿದ್ದು, ಯಾವ ಕ್ಷಣದಲ್ಲಿ ಮತ್ತೆ ನೀರು ಏರಿಕೆಯಾಗಿ ಸಂಚಾರಕ್ಕೆ ತಡೆಯಾಗುವುದೋ ಎಂಭ ಭೀತಿ ಪ್ರಯಾಣಿಕರನ್ನು ಕಾಡುತ್ತಿದೆ.