ನೂಜಿಬಾಳ್ತಿಲ ಗ್ರಾ.ಪಂ. ವತಿಯಿಂದ ರಾಜ್ಯ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಅಳವಡಿಕೆ

(ನ್ಯೂಸ್ ಕಡಬ) newskadaba.com ಕಡಬ, 01. ನೂಜಿಬಾಳ್ತಿಲ ಗ್ರಾ.ಪಂ.ವತಿಯಿಂದ ಜು.30ರಂದು ಪೆರಿಯಶಾಂತಿ – ಮರ್ದಾಳ ರಾಜ್ಯ ಹೆದ್ದಾರಿಯಲ್ಲಿರುವ ಬೆಥನಿ ಸಂಯುಕ್ತ ಪದವಿ ಪೂರ್ವ ಕಾಲೇಜ್ ಮುಂಭಾಗ ಗೋಳಿಯಡ್ಕ ಜಂಕ್ಷನ್, ಪೇರಡ್ಕ, ಸಾನ್‍ತೋಮ್ ಶಾಲಾ ಮುಂಭಾಗ ಜಂಕ್ಷನ್‍ನಲ್ಲಿ ಬ್ಯಾರಿಕೇಡ್ ಅಳವಡಿಸಲಾಯಿತು.
ಬ್ಯಾರಿಕೇಡ್ ಉದ್ಘಾಟಿಸಿ ಮಾತನಾಡಿದ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್‍ರವರು ಧರ್ಮಸ್ಥಳ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಾಗಿರುವ ಈ ರಸ್ತೆಯಲ್ಲಿ ವಿವಿಧ ರಾಜ್ಯಾದಂತ ಸಾಲು ಸಾಲಾಗಿ ನಿರಂತರ ವಾಹನಗಳು ಪುಣ್ಯಕ್ಷೇತ್ರಗಳಿಗೆ ಸಂದರ್ಶನಕ್ಕಾಗಿ ಬರುತ್ತಿರುವುದಲ್ಲದೆ ಈ ಭಾಗದಲ್ಲಿರುವ ಹಲವಾರು ಧರ್ಮ ದೇಗುಲಗಳು, ಪ್ರಾರ್ಥನಾ ಮಂದಿರಗಳು, ಚರ್ಚ್‍ಗಳಿಗೆ ಬರುವ ಸಾರ್ವಜನಿಕರಿಗೆ ಬರುವ ಯಾತ್ರಾರ್ಥಿಗಳ ವಾಹನಗಳು ಬರುತ್ತಿರುವುದರಿಂದ ಶಾಲಾ ಕಾಲೇಜುಗಳು ಕೂಡಾ ರಾಜ್ಯ ಹೆದ್ದಾರಿ ಪಕ್ಕದಲ್ಲಿದ್ದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಬೆಳಿಗ್ಗೆ ಸಂಜೆ ಶಾಲಾ ಪ್ರಾರಂಭ ಹಾಗೂ ಬಿಡುವ ಹೊತ್ತಿನಲ್ಲಿ ಈ ಬ್ಯಾರಿಕೇಡ್ ಅಳವಡಿಸಿ ವಾಹನಗಳು ನಿಧಾನವಾಗಿ ಚಲಿಸುವಂತೆ ಸೂಚನಾಫಲಕ ಹಾಕಲಾಗಿದೆ. ವಾಹನ ಚಾಲಕರು ಇದನ್ನು ಗಮನಿಸಿ ನಿಧಾನವಾಗಿ ಚಲಿಸಬೇಕಾಗಿದೆ ಎಂದರು. ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಮಾತನಾಡಿ ನಮ್ಮ ನಿರೀಕ್ಷೆಯಾಗಿದ್ದ ಈ ಬ್ಯಾರಿಕೇಡ್ ಅಳವಡಿಕೆ ಇಂದು ನೆರವೇರಿಸಲಾಗಿದ್ದು ವಾಹನ ಚಾಲಕರು ನಿಧಾನವಾಗಿ ಚಲಿಸುವ ಮೂಲಕ ಶಾಲಾ ಕಾಲೇಜುಗಳ ವ್ಯಾಪ್ತಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ ಎಂದು ಹೇಳಿದರು.
ಗ್ರಾ.ಪಂ.ಉಪಾಧ್ಯಕ್ಷೆ ಭವಾನಿ, ಸದಸ್ಯರಾದ ರಾಜು ಗೋಳಿಯಡ್ಕ, ತೋಮಸ್ ಕೆ.ಜೆ, ಹೊನ್ನಮ್ಮ, ವಲ್ಸ, ಜಾನಕಿ, ಅಮ್ಮಣಿ ಜೋಸೆಫ್, ರಜಿತಾಪದ್ಮನಾಭ, ರಾಮಚಂದ್ರ ಗೌಡ, ಹರೀಶ್ ಎನ್, ಬೆಥನಿ ಪ.ಪೂ ಕಾಲೇಜಿನ ನಿರ್ದೇಶಕ, ಬೆಥನಿ ಆಶ್ರಮದ ಸುಪೀರಿಯರ್ ರೆ|ಫಾ| ಸಕರಿಯಾಸ್ ನಂದಿಯಾಟ್, ಬೆಥನಿ ಪ.ಪೂ.ಕಾಲೇಜಿನ ಪಿಟಿಎ ಅಧ್ಯಕ್ಷ ಖಾದರ್ ಸಾಹೇಬ್, ಉಪನ್ಯಾಸಕರು, ಪ್ರೌಢಶಾಲಾ ಮುಖ್ಯಗುರುಗಳಾದ ಸುಬ್ರಹ್ಮಣ್ಯ ಭಟ್, ಶಿಕ್ಷಕ ತೋಮಸ್ ಎ.ಕೆ, ಶಾಲಾ ಶಿಕ್ಷಕ ಶಿಕ್ಷಕೇತರ ವೃಂದ, ಶಾಲಾ ವಿದ್ಯಾರ್ಥಿ ನಾಯಕಿ ಇಂದಿಕಾ ಹಾಗೂ ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಆನಂದ ಎ. ಸ್ವಾಗತಿಸಿ, ಬೆಥನಿ ಸಂಯುಕ್ತ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್ ವಂದಿಸಿದರು.
error: Content is protected !!
Scroll to Top