ಮಲಂಕರ ಕ್ಯಾಥೋಲಿಕ್ ಚರ್ಚ್ ಸ್ಥಾಪಕ ಮಾರ್ ಇವಾನಿಯೋಸ್ ರ 65 ನೇ ಪುಣ್ಯಸ್ಮರಣೆ ► ಕೆರ್ಮಾಯಿ ಸೈಂಟ್ ಮೇರೀಸ್ ಚರ್ಚ್‌ನಲ್ಲಿ ಅನುಸ್ಮರಣಾ ಪಾದಯಾತ್ರೆ

(ನ್ಯೂಸ್ ಕಡಬ) newskadaba.com ಕಡಬ, ಜು.23. ಮಲಂಕರ ಕ್ಯಾಥೋಲಿಕ್ ಚರ್ಚ್ನ ಸ್ಥಾಪಕ ದೇವದಾಸ ಮಾರ್ ಇವಾನಿಯೋಸ್ ಅವರ 65 ನೇ ಪುಣ್ಯಸ್ಮರಣೆ ಹಾಗೂ ಅನುಸ್ಮರಣಾ ಪಾದಯಾತ್ರೆಯು ಮಲಂಕರ ಕ್ಯಾಥೋಲಿಕ್ ಚರ್ಚ್ನ ಪುತ್ತೂರು ಧರ್ಮಪ್ರಾಂತ್ಯದ ದಕ್ಷಿಣ ಕನ್ನಡ ವಲಯದ ಕರ್ಮಾಯಿ ಸೈಂಟ್ ಮೇರೀಸ್ ಚರ್ಚ್ನ ಆತಿಥ್ಯದಲ್ಲಿ ರವಿವಾರ ಜರಗಿತು.

ಮಲಂಕರ ಕ್ಯಾಥೋಲಿಕ್ ಚರ್ಚ್ನ ಪುತ್ತೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ|ಡಾ| ಎಲ್ದೋ ಪುತ್ತನ್ಕಂಡತ್ತಿಲ್ ಅವರೊಂದಿಗೆ ಪುತ್ತೂರು ಧರ್ಮಪ್ರಾಂತ್ಯದ ಚಾನ್ಸಿಲರ್ ವಂ| ಫಿಲಿಪ್ ನೆಲ್ಲಿವಿಳ, ದಕ್ಷಿಣ ಕನ್ನಡ ವಲಯದ ಪೆÇ್ರೀಟೋ ವಿಕಾರ್ ವಂ| ಪೀಟರ್ ಜಾನ್, ವಂ| ಚಾಕೋ ಫಿಲಿಪ್ ಒಐಸಿ, ಕಿಡ್ಸ್  ಸಂಸ್ಥೆಯ ನಿರ್ದೇಶಕ ವಂ| ಜಾನ್ ಕುನ್ನತ್ತೇತ್ತ್, ಎಂ.ಸಿ.ವೈ.ಎಂ.  ದ.ಕ. ವಲಯದ ನಿರ್ದೇಶಕ  ವಂ| ಫ್ರಾನ್ಸೀಸ್ ತೆಕ್ಕೇಪೂಕ್ಕಳಂ, ವಂ| ಅಮಲ್ ರೋಯ್, ಕರ್ಮಾಯಿ ಸೈಂಟ್ ಮೇರೀಸ್ ಚರ್ಚ್ನ ವಿಕಾರ್ ವಂ| ಡಾನಿಯೇಲ್ ಕಡಕಂಪಳ್ಳಿ, ಮರ್ದಾಳ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆಯ ನಿರ್ದೇಶಕ ವಂ| ವಿಜೋಯ್ ತೆಕ್ಕೇಪೂಕ್ಕಳಂ, ಧರ್ಮಗುರುಗಳಾದ ವಂ| ಸೆಬಾಸ್ಟಿಯನ್, ವಂ| ಐಸಕ್ ಸ್ಯಾಮುವೇಲ್, ವಂ| ಥಾಮಸ್, ವಂ| ಜೂಬಿ ಮುಂತಾದವರ ನೇತತ್ವದಲ್ಲಿ ಪ್ರಾರ್ಥನೆ ಹಾಗೂ ಪವಿತ್ರ ದಿವ್ಯ ಬಲಿಪೂಜೆ ನಡೆಸಲಾಯಿತು.

Also Read  ಶಿರಸಿ- ಕುಮಟಾ- ಬೇಲೇಕೇರಿ ರಾಷ್ಟ್ರೀಯ ಹೆದ್ದಾರಿ ಬಂದ್

ಕಾರ್ಯಕ್ರಮದ ಪ್ರಯುಕ್ತ ಮಲಂಕರ ಕ್ಯಾಥೋಲಿಕ್ ಯೂತ್ ಮೂವ್ಮೆಂಟ್ ವತಿಯಿಂದ ವಿಶ್ವಾಸ ಘೋಷಣೆ ಸಾರುತ್ತಾ ಭಕ್ತಾದಿಗಳು ಕೆರ್ಮಾಯಿ ಸೈಂಟ್ ಮೇರೀಸ್ ಚರ್ಚ್ನಿಂದ  ಮರ್ದಾಳದ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆಯ ತನಕ  ಅನುಸ್ಮರಣ ಪಾದಯಾತ್ರೆ ನಡೆಸಿದರು.  ಪುತ್ತೂರು ಧರ್ಮಪ್ರಾಂತದ ಎಂ.ಸಿ.ವೈ.ಎಂ.  ಪದಾಧಿಕಾರಿಗಳು ಹಾಗೂ ಎಂ.ಸಿ.ವೈ.ಎಂ . ದಕ್ಷಿಣ ಕನ್ನಡ ವಲಯದ ವಿವಿಧ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Also Read  ಉಳ್ಳಾಲ: ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಅಪ್ರಾಪ್ತ ಯುವಕನಿಗೆ ಸಾರ್ವಜನಿಕರಿಂದ ಧರ್ಮದೇಟು..!

error: Content is protected !!
Scroll to Top