ಕಡಬ ಗೃಹರಕ್ಷಕ ದಳದವರಿಂದ ವನಮಹೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ಕಡಬ, ಜು.23. ಇಲ್ಲಿನ ಗೃಹರಕ್ಷಕ ದಳದವರಿಂದ ವನಮಹೋತ್ಸವ ಆಚರಣೆ ಜು.22ರಂದು ಕಡಬ ಮಾದರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

ಗೃಹರಕ್ಷಕದಳದ ಜಿಲ್ಲಾ ಕಮಾಡೆಂಟ್ ಡಾ| ಮುರಳಿಮೋಹನ್ ಚೂಂತಾರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಕಡಬ ಶ್ರೀ ದುರ್ಗಾಣಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ,ನಿವೃತ್ತ ಮುಖ್ಯ ಗುರು ಜನಾರ್ದನ ಗೌಡ ಪಣೆಮಜಲು ರವರು ಮಾತನಾಡಿ, ಮನುಷ್ಯ ಸಂಕುಲ ಮುಂದೆ ಉಳಿಯಬೇಕಾದರೆ ನಮಗೆ ಆಮ್ಲಜನಕ ಬೇಕು, ಈ ಆಮ್ಲಜನಕ ಮರ ಗಿಡಗಳಿಗೆ ಬಿಟ್ಟು ಯಾವುದೇ ಪ್ಯಾಕ್ಟರಿಯಿಂದ ತಯಾರಿಸಲು ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ನಾವು ಮರಗಿಡಗಳನ್ನು ಬೆಳೆಸಬೇಕು, ಇಂದಿನ ದಿನಗಳಲ್ಲಿ ಹವಾಮಾನ ವೈಪರಿತ್ಯಕ್ಕೆ ಕಾಡು ನಾಶವಾಗಿರುವುದೇ ಕಾರಣ ಈ ಹಿನ್ನಲೆಯಲ್ಲಿ ನಾವು ಸಂಘಟನೆಗಳ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ಕಡಬ ಗೃಹರಕ್ಷಕದಳದ ಕಾರ್ಯ ಶ್ಲಾಘನಿಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಡಬ ಮಾದರಿ ಶಾಲೆಯ ಮುಖ್ಯ ಶಿಕ್ಷಕ ಹಮೀದ್, ಗೃಹ ರಕ್ಷಕದಳದ ಘಟಕಾಧಿಕಾರಿ ಎಚ್.ಕೆ. ಗೋಪಾಲ್ ಉಪಸ್ತಿತರಿದ್ದರು. ಕಡಬ ಗೃಹರಕ್ಷಕ ದಳದ ಪ್ಲಟೂನ್ ಸಾರ್ಜಂಟ್ ತೀರ್ಥೇಶ್ ಎ.ಎಸ್. ಜಿಲ್ಲಾ ಕಮಾಡೆಂಟ್‍ರವರಿಗೆ ಗೌರವ ವಂದನೆ ಸಲ್ಲಿಸಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Also Read  ಕೊಳ್ನಾಡು: ರಸ್ತೆಗುರುಳಿದ ಅವಳಿ ಮರಗಳು ► ರಾಜ್ಯ ಹೆದ್ದಾರಿ 101 ಒಂದು ತಾಸು ಬ್ಲಾಕ್

ಈ ಸಂದರ್ಭದಲ್ಲಿ ಹಿರಿಯ ಗೃಹರಕ್ಷಕರಾದ ಸುಂದರ, ಉದಯಶಂಕರ್, ದಯಾನಂದ, ಜಯಪ್ರಕಾಶ್ ಸೇರಿದಂತೆ ಸುಮಾರು 44 ಜನ ಸಿಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು.

error: Content is protected !!