ಪ್ರಧಾನಮಂತ್ರಿ ಕೃಷಿ ಸಿಂಚಯ ಯೋಜನೆ ► ಪೆರಾಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸವಣೂರು, ಜು.21. ಅರಣ್ಯ ರಕ್ಷಣೆ ಮತ್ತು ಅಂತರ್ಜಲ ವೃದ್ದಿಯ ಮೂಲಕ ಮುಂದಿನ ಜನಾಂಗಕ್ಕೆ ಆರೋಗ್ಯ ಪೂರ್ಣ ಸಮಾಜವನ್ನು ಬಳುವಳಿಯಾಗಿ ನೀಡಬೇಕಾಗಿದೆ ಎಂದು ಜಲಾನಯನಾ ಯೋಜನೆಯ ಐದನೇ ಘಟಕದ ನಾಯಕ ಚಿದಾನಂದ ಹೇಳಿದರು.

   ಪೆರಾಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಯ ಯೋಜನೆ ಜಲಾನಯನ ಯೋಜನೆ ಐದನೇ ಘಟಕದ ಆಶ್ರಯದಲ್ಲಿ ಅರಣ್ಯ ಘಟಕಗಳ ಗಿಡ ನೆಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.  ಮನುಷ್ಯ ಇಂದು ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಬಲಿಕೊಡುತ್ತಿದ್ದಾನೆ. ಇದರ ಪರಿಣಾಮ ಕಲುಷಿತ ಆಹಾರದೊಂದಿಗೆ ವಿಷಪೂರಿತ ಗಾಳಿಯನ್ನೇ ಸೇವಿಸುವಂತಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಅಣುಬಾಂಬ್ ದುರಂತಕ್ಕಿಂತಕ್ಕಿಂತಲೂ ಭೀಕರ ಪರಿಸ್ಥಿತಿಯನ್ನು ಮುಂದಿನ ಜನಾಂಗ ಎದುರಿಸಬೇಕಾಗಿದೆ. ಈ ಕಾರಣಕ್ಕಾಗಿ ಅರಣ್ಯ ಮತ್ತು ಅಂತರ್ಜಲವನ್ನು ರಕ್ಷಿಸುವ ಕಾರ್ಯ ಇಂದಿನಿಂದಲೇ ನಮ್ಮಿಂದಾಗಬೇಕು ಎಂದರು. ಅಲ್ಲದೆ ಶಾಲೆಯ 6ಎಕ್ರೆ ಜಮೀನಿನಲ್ಲಿ ಗೇರು, ಹಲಸು, ಮಾವು, ಸಾಗುವಾನಿ ಮೊದಲಾದ ಸಸಿಗಳನ್ನು ನೆಡುವ ಗುರಿಯನ್ನು ಹೊಂದಲಾಗಿದೆ. ಮತ್ತು ಈ ಯೋಜನೆಯ ಯಶಸ್ಸಿಗೆ ಶಾಲಾಭಿವೃದ್ದಿಯೊಂದಿಗೆ ಕೈ ಜೋಡಿಸಿ ಶ್ರಮಿಸಲಾಗುವುದು ಎಂದರು.

ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಮೋನಪ್ಪ ಗೌಡ ಪೂಂಜ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಈ ಸಂಧರ್ಭದಲ್ಲಿ ಶಾಲಾ ಪ್ರಭಾರ ಮುಖ್ಯಗುರು ಹೇಮಲತಾ ಪ್ರದೀಪ್, ಯೋಜನೆಯ ಗುತ್ತಿಗೆದಾರ ಜಿಲಾನಿ, ಶಾಲಾ ಶಿಕ್ಷಕ ವೃಂದ ಪೊಷಕ ವೃಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group