ಆರನೇ ದಿನಕ್ಕೆ‌ಕಾಲಿಟ್ಟ ಹೊಸ್ಮಠ ಸೇತುವೆ ಮುಳುಗಡೆ ► ದ್ವಿಚಕ್ರ ವಾಹನ ಸವಾರರಿಗೆ ಸಹಾಯದ ನೆಪದಲ್ಲಿ ಬಲಾತ್ಕಾರದ ಹಣ ವಸೂಲಿ ► ಕಂಡೂ ಕಾಣದಂತಿರುವ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಜು.15. ಮುಳುಗು ಸೇತುವೆಯೆಂದೇ ಖ್ಯಾತಿ ಪಡೆದಿರುವ ಹೊಸ್ಮಠ ಸೇತುವೆಯು ಮುಳುಗಡೆಗೊಂಡು ಆರನೇ ದಿನಕ್ಕೆ ಕಾಲಿಟ್ಟಿದೆ.

ಸೇತುವೆಯ ಮೇಲೆ ನೀರಿನ ಹರಿವು ಒಂದೇ ರೀತಿಯಲ್ಲಿದ್ದು, ನೀರಿನ ಹರಿವು ಕಡಿಮೆಯಾಗಬಹುದೆಂಬ ಆಶಾಭಾವನೆಯಲ್ಲಿ ಸೇತುವೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ಕಾಯುತ್ತಿದ್ದಾರೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಈ ಹಳೆಯ ಮುಳುಗು ಸೇತುವೆಯ ಪಕ್ಕದಲ್ಲೇ ಹೊ ಸೇತುವೆಯೊಂದು ನಿರ್ಮಾಣವಾಗುತ್ತಿದ್ದು, ಕಾಮಗಾರಿ ಕೊನೆಯ ಹಂತದಲ್ಲಿದೆ. ಇದರೆಡೆಯಲ್ಲಿ ಸ್ಥಳೀಯ ವ್ಯಕ್ತಿಯೋರ್ವರು ನೂತನ ಸೇತುವೆಯ ಮೇಲೆ ಮರದ ಹಲಗೆಯೊಂದನ್ನಿಟ್ಟು ದ್ವಿಚಕ್ರ ವಾಹನಗಳನ್ನು ಸಾಗಿಸಿ ಪ್ರತಿಯೊಂದು ವಾಹನಕ್ಕೂ ಹತ್ತು ರೂ. ನಂತೆ ವಸೂಲಿ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಈ ಹಿಂದೆ ಮರಳಿನ ಚೀಲ ಹಾಗೂ ಕಲ್ಲನ್ನಿಟ್ಟು ದ್ವಿಚಕ್ರ ವಾಹನಗಳು ಸಾಗುತ್ತಿದ್ದರೂ, ಕಳೆದೆರಡು ದಿನಗಳಿಂದ ಸ್ಥಳದಲ್ಲಿದ್ದ ಕಲ್ಲನ್ನು ತೆರವುಗೊಳಿಸಿ ಸಾರ್ವಜನಿಕ ಸೇತುವೆಯಲ್ಲಿ ಮರದ ಹಲಗೆಯನ್ನಿಟ್ಟು ಅಕ್ರಮವಾಗಿ ದುಡ್ಡು ಮಾಡಲಾಗುತ್ತಿದ್ದರೂ, ಸ್ಥಳದಲ್ಲಿರುವ ಪೊಲೀಸರು ಕಂಡೂ ಕಾಣದಂತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Also Read  ಬಿಜೆಪಿ ಕಡಬ ಮಹಾಶಕ್ತಿ ಕೇಂದ್ರದ ನೂತನ ಪದಾಧಿಕಾರಿಗಳ ಆಯ್ಕೆ ➤ ಅಧ್ಯಕ್ಷರಾಗಿ ಗಿರೀಶ್ ಎ.ಪಿ., ಕಾರ್ಯದರ್ಶಿಯಾಗಿ ಕೇಶವ ಗೌಡ ಬೇರಿಕೆ ಆಯ್ಕೆ

error: Content is protected !!
Scroll to Top