ಕೇಪು: ಕೈರುಲ್ ಕರೀಂ ಮದರಸ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ,ಜು.14. ಇಲ್ಲಿನ ಕೇಂದ್ರ ಜುಮ್ಮಾ ಮಸೀದಿಗೊಳಪಟ್ಟ ಕೇಪು ಕೈರುಲ್ ಕರೀಂ ಮದರಸವನ್ನು ಇಸ್ಲಾಂ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನಕ್ಕೊಳಪಡಿಸಿ ಜು.10ರಂದು ಉದ್ಘಾಟನೆಗೊಳಿಸಲಾಯಿತು.

ಕೋಡಿಂಬಾಳ ರಹ್ಮಾನಿಯಾ ಜುಮ್ಮಾ ಮಸೀದಿಯ ಖತೀಬ್ ಸಂಶುದ್ದೀನ್ ಸಹದಿಯವರು ಉದ್ಘಾಟಿಸಿ ದುಃವಾಶೀರ್ವಚನ ನೀಡಿದರು. ಕಡಬ ಸುನ್ನೀ ಜಮಾಅತುಲ್ ಮುಅಲ್ಲಿಮೀನ್ ರೇಂಜ್ ಅಧ್ಯಕ್ಷ ಮುಹಮ್ಮದ್ ಹನೀಫ್ ಸಖಾಪಿಯವರು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ಕಡಬ ಕೇಂದ್ರ ಜುಮ್ಮಾ ಮಸೀದಿಯ ಸಿರಾಜುಲ್ ಹುದಾ ಎಜುಕೇಶನ್ ಸಂಸ್ಥೆಯ ಅಧ್ಯಕ್ಷ ಖಾದರ್ ಸಾಹೇಬ್ ಕಲ್ಲುಗುಡ್ಡೆ ಮಾತನಾಡಿ, ಮಕ್ಕಳಿಗೆ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣವು ಅತೀ ಅಗತ್ಯವಾಗಿದ್ದು ಅವರು ಶಿಕ್ಷಣದಿಂದ ವಂಚಿತರಾಗದಂತೆ ಶ್ರಮಿಸುವುದು ಪೋಷಕರ ಕರ್ತವ್ಯವಾಗಿದೆ. ಮಕ್ಕಳ ಶಾಲಾ ಹಾಗೂ ದೀನಿ ವಿದ್ಯಾಭ್ಯಾಸಗಳಲ್ಲಿ ಗುರುಗಳು, ಪೋಷಕರು, ನಿಕಟ ಸಂಪರ್ಕದಲ್ಲಿದ್ದುಕೊಂಡು ಮಕ್ಕಳ ಯಶಸ್ವಿಗೆ ಶ್ರಮಿಸಬೇಕೆಂದರು.

Also Read  102 ನೆಕ್ಕಿಲಾಡಿ: ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ

ಕೇಪು ಕೈರುಲ್ ಕರೀಂ ಮದರಸ ಕಮಿಟಿ ಅಧ್ಯಕ್ಷ ಹಮೀದ್ ಸಾಹೇಬ್ ಅಧ್ಯಕ್ಷತೆ ವಹಿಸಿದ್ದರು. ಕೇಪು ಮದರಸದ ಮೌಲಾನಾ ಹಜ್ರತ್ ಅಬ್ದುಲ್ ರಝ ರಝ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿರಾಜುಲ್ ಹುದಾ ಎಜುಕೇಶನ್ನ ಜೊತೆಕಾರ್ಯದರ್ಶಿ ಶುಕೂರ್ ಅಡ್ಡಗದ್ದೆ, ಕಡಬ ಎಸ್ಎಂಎ ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಾಸೀರ್ ಸಹದಿ, ಕಡಬ ರೇಂಜ್ ಪ್ರಧಾನ ಕಾರ್ಯದರ್ಶಿ ಇರ್ಷದ್ ಸಹದಿ, ಅಕ್ಬರ್ ಸಾಹೇಬ್ ಕೇಪು ಸೇರಿದಂತೆ ಜಮಾಅತರು, ಎಸ್ಎಂಎ ಸದಸ್ಯರು, ಎಜುಕೇಶನ್ ಟ್ರಸ್ಟ್ನ ಸದಸ್ಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೇಪು ಮದರಸ ಕಮಿಟಿ ಕಾರ್ಯದರ್ಶಿ ಹಾಫಿಕ್ ಸ್ವಾಗತಿಸಿ, ಇಕ್ಬಾಲ್ ಕೇಪು ವಂದಿಸಿದರು. ಕಡಬ ಕೇಂದ್ರ ದಾರುಲ್ ಉಲೂಮ್ ಮದರಸದ ಸದರ್ ಅಬ್ದುಲ್ ರವೂಫ್ ಲತೀಫಿ ಕಾರ್ಯಕ್ರಮ ನಿರೂಪಿಸಿದರು.

Also Read  ಕಡಬ: ದೀಪಾವಳಿ ಪ್ರಯುಕ್ತ 'ಎಸ್ಇಎಸ್ ಬರ್ಲಿನ್' ಮೆನ್ಸ್ ಶೋರೂಂ ನಲ್ಲಿ ಭರ್ಜರಿ ಆಫರ್..!

 

error: Content is protected !!
Scroll to Top