ಸಾರಕೆರೆ ಸೇತುವೆ ಮೇಲೆ ನಿಂತಿರುವ ನೀರು

(ನ್ಯೂಸ್ ಕಡಬ) newskadaba.com ಕಡಬ,ಜೂ.13. ಕಡಬ – ಪಂಜ ರಸ್ತೆಯ ಕೋಡಿಂಬಾಳ ಸಮೀಪದ ಸಾರಕೆರೆ ಕಿರು ಸೇತುವೆಯಲ್ಲಿ ಮಳೆ ನೀರು ಸರಗವಾಗಿ ಹರಿಯಲು ಅಡಚಣೆಯಾಗಿ ರಸ್ತೆ ಸಂಚಾರಿಗಳಿಗೆ ತೊಂದರೆಯಾಗುತ್ತಿದೆ. ಸೇತುವೆಯ ಎರಡು ಬದಿಗಳು ಏರು ರಸ್ತೆಯಾಗಿದ್ದು ರಸ್ತೆ ಮೇಲೆ ಬಿದ್ದ ನೀರು ಸೇತುವೆಗೆ ಹರಿದುಬರುತ್ತದೆ.

ಸೇತುವೆಯಲ್ಲಿನ ನೀರು ಹರಿಯುವಿಕೆಗೆ ಅಳವಡಿಸಿದ ರಂದ್ರದಲ್ಲಿ ಹೂಳು ತುಂಬಿದ್ದು ಪರಿಣಾಮ ಸೇತುವೆ ಮೇಲೆ ನೀರು ಸಂಗ್ರವಾಗಿ ವಾಹನ ಸವಾರರೂ ಪಾದಚಾರಿಗಳು ತೊಂದರೆಗೊಳಗಾಗಿದ್ದಾರೆ. ಇತ್ತೀಚಿನ ಕೆಲವು ದಿನಗಳಲ್ಲಿ ನಿರಂತರ ಮಳೆಯಾಗುತ್ತಿದ್ದು ಸೇತುವೆ ಮೇಲೆ ಅತೀ ಹೆಚ್ಚು ನೀರು ಸಂಗ್ರವಾಗುತ್ತದೆ. ಬೆಳಿಗ್ಗೆ ಮತ್ತು ಸಾಯಂಕಾಲ ಈ ಸೇತುವೆ ಮಲೆ ನಡೆದಾಡಿಕೊಂಡು ವಿದ್ಯಾಥರ್ಿಗಳು ಸ್ಥಳಿಯರು ತೆರಳುತ್ತಾರೆ. ಈ ಸಂದರ್ಭ ವಾಹನ ಎದುರಾದರೆ ಕೆಸರು ನೀರು ಸಿಂಚನವಾಗುತ್ತಿದೆ . ಕಳೆದ ಕೆಲವು ವರ್ಷದಿಂದ ಪ್ರತಿ ಮಳೆಗಾಲದಲ್ಲೂ ಈ ಸಮಸ್ಯೆಯಿದೆ. ಈ ಬಗ್ಗೆ ಸಂಬಂದಪಟ್ಟವರು ಕ್ರಮಕೈಗೊಳ್ಳಬಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Also Read  ಮಂಗಳೂರು: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ಪ್ರಕರಣ ಇಬ್ಬರು ಆರೋಪಿಗಳ ಬಂಧನ

 

error: Content is protected !!
Scroll to Top