ಸುರತ್ಕಲ್: ಒಂದು ತಿಂಗಳ ಇಂಟರ್ನ್ ಶಿಪ್ ತರಬೇತಿ

(ನ್ಯೂಸ್ ಕಡಬ) newskadaba.com ಮಂಗಳೂರು,ಜುಲೈ.12. ದ.ಕ ನಿರ್ಮಿತಿ ಕೇಂದ್ರ ಸುರತ್ಕಲ್ ಇದರ ಆವರಣದಲ್ಲಿ ದ.ಕ ಜಿಲ್ಲೆಯ 4 ಇಂಜಿನಿಯರಿಂಗ್ ಕಾಲೇಜ್ಗಳ ಆಯ್ದ ಸುಮಾರು 35 ವಿದ್ಯಾರ್ಥಿಗಳಿಗೆ 1 ತಿಂಗಳ ಅವಧಿಯ ಇಂಟರ್ನ್ ಶಿಪ್ ತರಬೇತಿಯನ್ನು ಡಾ. ಕೆ.ಎಸ್. ಬಾಬುನಾರಾಯಣ್, ಎನ್.ಐ.ಟಿ.ಕೆ ಸುರತ್ಕಲ್ ಇವರು ಉದ್ಘಾಟಿಸಿ ಮಾತನಾಡುತ್ತಾ, ಇಂಟರ್ನ್ ಶಿಪ್ ತರಬೇತಿಯು ಜುಲೈ 9 ರಿಂದ ಆಗಸ್ಟ್ 4 ರವರೆಗೆ ನಡೆಯಲಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯೆಯೊಂದಿಗೆ ಪ್ರಾಕ್ಟಿಕಲ್ ಟ್ರೈನಿಂಗ್ ಕೂಡ ಅವಶ್ಯಕತೆ ಇದೆ ಎಂದು ಮನಗೊಂಡು ಎಲ್ಲಾ ಕೋರ್ಸ್ ಗಳಲ್ಲಿ ಈ ತರಬೇತಿಯನ್ನು ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹವಾಗಿದೆ ಸಿವಿಲ್ ಇಂಜಿನಿಯರ್ಗಳು ಮುಖ್ಯವಾಗಿ ದೇಶದ ಅಭಿವೃದ್ಧಿಯಲ್ಲಿ ಅತ್ಯುನ್ನತ ಪಾತ್ರವನ್ನು ವಹಿಸಿರುತ್ತಾರೆ. ಸಿವಿಲ್ ಇಂಜಿನಿಯರ್ ಆಗಲು ಪ್ರತಿ ವಿದ್ಯಾರ್ಥಿಯು ಹೆಮ್ಮೆ ಪಡಬೇಕೆಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಪ್ರೊ. ಸುಭಾಷ್ ಯರ್ಗಲ್ ಮತ್ತು ಪ್ರೊ. ಸುನಿಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತರಬೇತಿಯ ಮಹತ್ವ ಮತ್ತು ವಿದ್ಯಾರ್ಜನೆಯಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಪಾತ್ರಗಳ ಬಗ್ಗೆ ವಿವರಿಸಿದರು. ದ.ಕ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾವಿ ಅತಿಥಿಗಳನ್ನು ಸ್ವಾಗತಿಸಿದರು.

Also Read  ವಿಡಿಯೋ ಚಿತ್ರೀಕರಣ ಪ್ರಕರಣ..! - ಉಡುಪಿಗೆ ಆಗಮಿಸಿದ ಸಿಐಡಿ ತಂಡ

ಇಂಟರ್ನ್ ಶಿಪ್ ತರಬೇತಿ ಕಾರ್ಯಕ್ರಮದಲ್ಲಿ ಸುಳ್ಯ ಕೆ.ವಿ.ಜಿ. ಕಾಲೇಜ್ ಆಫ್ ಇಂಜಿನಿಯರಿಂಗ್, ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್ಮೆಂಟ್, ಶ್ರೀನಿವಾಸ ಸ್ಕೂಲ್ ಆಫ್ ಇಂಜಿನಿಯರಿಂಗ್, ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಆಂಡ್ ಇಂಜಿನಿಯರಿಂಗ್ ಕಾಲೇಜ್ನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

error: Content is protected !!
Scroll to Top