(ನ್ಯೂಸ್ ಕಡಬ) newskadaba.com ಕಡಬ,ಜು.05. 2018-19ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸರ್ಕಾರವು ಪ್ರಜಾಪ್ರಭುತ್ವದ ಮಾದರಿಯಲ್ಲಿ ದಿನಾಂಕ 13.06.2018ನೇ ಬುಧವಾರದಂದು ಶಾಲಾಮುಖ್ಯಗುರುಗಳ ನೇತೃತ್ವದಲ್ಲಿ ನಡೆಯಿತು. ವಿದ್ಯಾರ್ಥಿಗಳು ಮತವನ್ನು ಹಾಕುವುದರ ಮೂಲಕ ಶಾಲಾ ನಾಯಕ ಮತ್ತು ಉಪನಾಯಕನನ್ನು ಆಯ್ಕೆ ಮಾಡಿದರು.
ಶಾಲಾ ನಾಯಕನಾಗಿ ಗುರುಚರಣ್ ಡಿ ಎ 10ನೇ ತರಗತಿ, ಶಾಲಾಉಪನಾಯಕನಾಗಿ ಎಸ್ ಸರ್ವೇಶ್ 9ನೇ ತರಗತಿ, ಸಭಾಪತಿಯಾಗಿ ವಿನ್ಯಾಸ್ ಜೈನ್ ಬಿ 10ನೇ ತರಗತಿ, ನಿಹಾರ್ ರೈ 8ನೇ ತರಗತಿ, ಶಿಕ್ಷಣ ಮಂತ್ರಿಯಾಗಿ ಅನನ್ಯ ಕೆ ಎ 10ನೇ ತರಗತಿ, ಹರ್ಷಿತಾ ಬಿ 9ನೇ ತರಗತಿ, ಶಿಸ್ತು ಮಂತ್ರಿಯಾಗಿ ಸಂತೋಷ್ ಪಿ 10ನೇ ತರಗತಿ, ವಿದ್ಯಾ 9ನೇ ತರಗತಿ, ಗ್ರಂಥಾಲಯ ಮಂತ್ರಿಯಾಗಿ ಸಂಜನಾ ಬಿ 10ನೇ ತರಗತಿ, ಪೂಜಾ ಪಿ ಸಿ 9ನೇ ತರಗತಿ, ಸ್ವಚ್ಛತಾ ಮಂತ್ರಿಯಾಗಿ ಸುಬ್ರಹ್ಮಣ್ಯ 9ನೇ ತರಗತಿ, ಚೇತನಾ ಎ ಎಸ್ 9ನೇ ತರಗತಿ, ಆರೋಗ್ಯ ಮಂತ್ರಿಯಾಗಿ ನೇಹಾ ರೈ ಕೆ 10ನೇ ತರಗತಿ, ಲಕ್ಷ್ಮೀಶ ಡಿ ಜೆ 9ನೇ ತರಗತಿ, ಕೃಷಿ ಮಂತ್ರಿಯಾಗಿ ಯಜ್ಞೇಶ್ ಬಿ ಜೆ ರೈ 10ನೇ ತರಗತಿ, ಭವಿಷ್ 9ನೇ ತರಗತಿ, ನೀರಾವರಿ ಮಂತ್ರಿಯಾಗಿ ನಿತೇಶ್ ಯಂ 10ನೇ ತರಗತಿ, ಶ್ರವಣ್ ಪಿ ಎನ್ 9ನೇ ತರಗತಿ, ಕ್ರೀಡಾ ಮಂತ್ರಿಯಾಗಿ ಸ್ವಾತಿ ಪಿ 10ನೇ ತರಗತಿ, ನಿತ್ಯಸಾಗರ್ ಆಳ್ವ 9ನೇ ತರಗತಿ, ಗೃಹ ಮಂತ್ರಿಯಾಗಿ ದರ್ಶನ್ 10ನೇ ತರಗತಿ, ಹೇಮಂತ್ ಕೆ 8ನೇ ತರಗತಿ, ಆಹಾರ ಮಂತ್ರಿಯಾಗಿ ಎಸ್ ಜಿ ಗಣೇಶ್ ಪ್ರಸಾದ್ 9ನೇ ತರಗತಿ, ಪ್ರಿಯಾನ್ 9ನೇ ತರಗತಿ, ಸಾಂಸ್ಕೃತಿಕ ಮಂತ್ರಿಯಾಗಿ ವಿದ್ಯಾಶ್ರೀ 10ನೇ ತರಗತಿ, ಕರೀಷ್ಮಾ ಕೆ 9ನೇ ತರಗತಿ.
ವಿರೋಧ ಪಕ್ಷದ ನಾಯಕ ಕೆ. ವಿನ್ಯಾಸ್ 10ನೇ ತರಗತಿ, ಸದಸ್ಯರಾಗಿ ಧೃತಿ ಕೆ ಕೆ 9ನೇ ತರಗತಿ, ಶ್ರಾವ್ಯ ಪಿ 9ನೇ ತರಗತಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸುಪ್ರೀಯಾ ಎಂ ಇವರು ಸಹಕರಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರುಗಳಾದ ಶೈಲಶ್ರೀ ರೈ ಎಸ್ , ಸಹಶಿಕ್ಷಕರು ಚುನಾವಣೆಯಲ್ಲಿ ಸಹಕರಿಸಿದರು.