(ನ್ಯೂಸ್ ಕಡಬ) newskadaba.comಸುಳ್ಯ,ಜು,04. ಕಳೆದ ವಾರವಷ್ಟೇ ಮುಲಾರ್ ಪಟ್ನ ಎಂಬಲ್ಲಿ ಸೇತುವೆ ಕುಸಿದು ಬಿದ್ದ ಘಟನೆ ನಡೆದಿದ್ದು, ಬಹು ದೊಡ್ಡ ಅನಾಹುತವೊಂದು ತಪ್ಪಿದೆ…ಈ ಸೇತುವೆ ಕುಸಿದು ಬೀಳಲಿದೆ ಎಂದು ಸಾರ್ವಜನಿಕರೊಬ್ಬರು ಮೊದಲೇ ಅಧಿಕಾರಿಗಳಿಗೆ ತಿಳಿಸಿದ್ದು ಅದರ ವೀಡಿಯೋ ಕೂಡ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು…
ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಕಣ್ಣು ತೆರೆಯದ ಕಾರಣ ಈ ಅನಾಹುತ ನಡೆದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ,ಅದೇ ರೀತಿ ಸುಳ್ಯ ಮೊಗರ್ಪಣೆ ಮಸೀದಿ ಬಳಿ ಇರುವ ಸೇತುವೆ ಕೂಡ ಕುಸಿದು ಬೀಳುವ ಅಂಚಿನಲ್ಲಿದೆ….ಸೇತುವೆಯ ನಡು ಭಾಗದಲ್ಲಿ ಹಾಕಿದ ಎಲ್ಲಾ ಡಾಮರುಗಳು ನೀರುಪಾಲಾಗಿದ್ದು, ಕಬ್ಬಿಣದ ಸರಳುಗಳೇ ಆಶ್ರಯದಂತಿದೆ,ಮಡಿಕೇರಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ನಡುವೆ ಇರುವ ಈ ರಸ್ತೆ ಮೇಲೆ ದಿನವೊಂದಕ್ಕೆ ನೂರಾರು ಘನವಾಹನಗಳು ಸಂಚರಿಸುತ್ತದೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರು – ಶಿರಾಡಿ ರಸ್ತೆಯು ದುರಸ್ತಿಯಾಗಿರುವುದರಿಂದ ಬೆಂಗಳೂರಿಗೆ ಸಂಚರಿಸುವ ಎಲ್ಲಾ ವಾಹನವು ಮಡಿಕೇರಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನೇ ಅವಲಂಭಿತವಾಗಿವೆ…
ಈ ಸೇತುವೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕ್ಕೊಳ್ಳದಿದ್ದರೆ ಬಲು ಅನಾಹುತ ಸಂಭವಿಸುವುದರ ಜೊತೆಗೆ ಮಂಗಳೂರು – ಮೈಸೂರು ಸಂಪರ್ಕ ಕಡಿತಗೊಳ್ಳುವುದರಲ್ಲಿ ಸಂಶಯವಿಲ್ಲ.
ಈ ಬಗ್ಗೆ ಕರ್ನಾಟಕ ಸರಕಾರದ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಯವರಾದ ವಿ.ಪೊನ್ನುರಾಜ್ ಇವರಿಗೆ ಪುತ್ತೂರಿನ ಖ್ಯಾತ ನ್ಯಾಯವಾದಿ ನೂರುದ್ದೀನ್ ಸಾಲ್ಮರ ದೂರು ಸಲ್ಲಿಸಿದ್ದು,ಆದಷ್ಟು ಬೇಗ ಸಂಭಂದ ಪಟ್ಟ ಅಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗೆ ತಿಳಿಸಿ ಆದಷ್ಟು ಬೇಗ ಸೇತುವ ಸರಿಪಡಿಸುವ ಭರವಸೆಯನ್ನು ನೀಡಿದ್ದಾರೆ.