(ನ್ಯೂಸ್ ಕಡಬ) newskadaba.com ವೇಣೂರು,ಜೂ. 27. ಯುವಕನೋರ್ವನು ತನ್ನ ಮನೆಯ ಫ್ಯಾನ್ ಗೆ ಬೆಡ್ ಶೀಟ್ ನಿಂದ ನೇಣು ಬಿಗಿದು ಕೊಂಡು ಆತ್ಮ ಹತ್ಯೆ ಮಾಡಿಕೊಂಡ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ದಂದು ನಡೆದಿದೆ. ತನ್ನ ತಂಗಿಗೆ ಜೂ 20 ರಂದು ಹೆರಿಗೆಯಾಗಿದ್ದು, ಉಸಿರಾಟದ ತೊಂದರೆಯಿಂದ ಮಗು ಜೂ 22 ರಂದು ಮೃತಪಟ್ಟಿತ್ತು.
ಇದರಿಂದ ಮಾನಸಿಕವಾಗಿ ಮನನೊಂದ ದಿನೇಶ್(30) ಮನೆಯವರು ದನದ ಕರುವನ್ನು ತೋಟಕ್ಕೆ ಬಿಡಲು ಹೋಗಿದ್ದ ಸಮಯದಲ್ಲಿ ಬೆಳಗ್ಗೆ 9.50 ಗಂಟೆಯಿಂದ 10.10 ಗಂಟೆಯ ಮದ್ಯಾವಧಿಯಲ್ಲಿ ತನ್ನ ಮನೆಯ ಫ್ಯಾನ್ ಗೆ ಬೆಡ್ ಶೀಟ್ ನಿಂದ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








