ಕಡಬ: ಎಡೆಬಿಡದ ಮಳೆಗೆ ಗುಡ್ಡ ಕುಸಿದು ಧರೆಗುರುಳಿದ ವಿದ್ಯುತ್ ಕಂಬ ► ಕೆಲವೇ ಕ್ಷಣಗಳ ಅಂತರದಲ್ಲಿ ಅಪಾಯದಿಂದ ಪಾರಾದ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಕಡಬ, ಜೂ.26. ಎಡೆಬಿಡದೆ ಮಳೆ‌ ಸುರಿಯುತ್ತಿರುವುದರಿಂದಾಗಿ ವಿದ್ಯುತ್ ಕಂಬದ ಜೊತೆಗೆ ಗುಡ್ಡ ಕುಸಿದು ಬಿದ್ದ ಘಟನೆ ಕಡಬದ ಮುಖ್ಯ ಪೇಟೆಯಲ್ಲಿ ಮಂಗಳವಾರ ಸಂಜೆ‌ ನಡೆದಿದೆ.

ಇಲ್ಲಿನ ಮೀನು ಮಾರುಕಟ್ಟೆಯ ಸಮೀಪದದಲ್ಲಿನ ಗುಡ್ಡೆ ಕುಸಿದಿದ್ದು, ತುದಿಯಲ್ಲಿದ್ದ ವಿದ್ಯುತ್ ಕಂಬ ಧರೆಗುರುಳಿದೆ. ಇದರಿಂದಾಗಿ ಮೀನು ಮಾರುಕಟ್ಟೆಯ ಶೆಡ್ ಗೆ ಹಾನಿಯಾಗಿದೆ. ಎಲ್ಲಾ ದಿನಗಳಲ್ಲಿ ಈ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆಗೊಳಿಸಲಾಗುತ್ತಿತ್ತಾದರೂ ಇಂದು ಯಾವುದೇ ವಾಹನಗಳಿರಲಿಲ್ಲ. ಅಲ್ಲದೆ ಘಟನೆ ನಡೆಯುವುದಕ್ಕಿಂತ ಕೆಲವೇ ಕ್ಷಣಗಳ ಮೊದಲು ಶಾಲಾ ವಿದ್ಯಾರ್ಥಿಗಳು ಇದೇ ಸ್ಥಳದಿಂದಾಗಿ ತೆರಳಿದ್ದರೆನ್ನಲಾಗಿದೆ.

Also Read  ಗರ್ಭಿಣಿಯರ ಚಿಕಿತ್ಸೆ ನೀಡದಿದ್ದರೆ ಕಠಿಣ ಕ್ರಮ ➤ ದ.ಕ ಉಸ್ತುವರಿ ಸಚಿವರಿಂದ ಎಚ್ಚರಿಕೆ

error: Content is protected !!
Scroll to Top