ಪೂರ್ವ ದ್ವೇಷದ ಹಿನ್ನೆಲೆ ► ಚಿಕ್ಕಮಗಳೂರು ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿಯ ಬರ್ಬರ ಕೊಲೆ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜೂನ್‌.23. ಬಿಜೆಪಿ ಮುಖಂಡರೋರ್ವರನ್ನು ಚೂರಿಯಿಂದ ಇರಿದು ಬರ್ಬರವಾಗಿ ಕೊಂದ ಘಟನೆ‌ ಚಿಕ್ಕಮಗಳೂರು ಜಿಲ್ಲೆಯ ಗೌರಿ ಕಾಲುವೆ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಚಿಕ್ಕಮಗಳೂರಿನ ಉಪ್ಪಳ್ಳಿ ನಿವಾಸಿ, ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್‌ ಅನ್ವರ್ (46) ಎಂದು ಗುರುತಿಸಲಾಗಿದೆ. ಅನ್ವರ್ ಶುಕ್ರವಾರ ರಾತ್ರಿ ತನ್ನ ಮನೆಗೆ ಹೋಗುತ್ತಿದ್ದ ವೇಳೆ ಗೌರಿ ಕಾಲುವೆಯ ಬಳಿ ದುಷ್ಕರ್ಮಿಗಳು ಕಾದು ಕುಳಿತು ಚಾಕುವಿನಿಂದ ಇರಿದು ಕೊಲೆ ಗೈದಿದ್ದಾರೆ ಎಂದು ತಿಳಿದುಬಂದಿದೆ. ಹಳೇ ದ್ವೇಷವೇ ಕೊಲೆಗೆ ಕಾರಣ‌ ಎನ್ನಲಾಗುತ್ತಿದ್ದು, ಬಸವನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  1.09 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ: ಮೂವರು ಅರೆಸ್ಟ್

error: Content is protected !!
Scroll to Top