ಕಲ್ಲುಗುಡ್ಡೆ: ಮದ್ಯದಂಗಡಿ ತೆರೆಯುವುದಕ್ಕೆ ತೀವ್ರ ಆಕ್ಷೇಪ

(ನ್ಯೂಸ್ ಕಡಬ) newskadaba.com ಕಡಬ, ಜು.15. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಎಂಬಲ್ಲಿ ಮದ್ಯದಂಗಡಿ ಆರಂಭಗೊಳ್ಳುವ ನಿಟ್ಟಿನಲ್ಲಿ ಗುಮಾನಿ ಇದ್ದು ಇದಕ್ಕೆ ಕಡಬ ಸಿ ಎ ಬ್ಯಾಂಕ್ ಮಾಜಿ ನಿರ್ದೇಶಕ ಚಂದ್ರಶೇಖರ ಗೌಡ ಹಳೆನೂಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅವರು ಹೇಳಿಕೆ ನೀಡ, ಸುಪ್ರೀಂ ಕೋರ್ಟ್ನ ಆದೇಶದಂತೆ ಹೆದ್ದಾರಿಗಳ ಬದಿಯಲ್ಲಿರುವ ಮದ್ಯದಂಗಡಿಯನ್ನು ಬಂದ್ ಮಾಡಲಾಗಿದೆ.ಮುಚ್ಚಲ್ಪಟ್ಟ ಮದ್ಯದಂಗಡಿಯನ್ನು ನೂಜಿಬಾಳ್ತಿಲದಲ್ಲಿ ತೆರಯುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದೆ. ಕಲ್ಲುಗುಡ್ಡೆ ಎಂಬಲ್ಲಿ ಈ ಹಿಂದೆ ಇದ್ದ ಸರಕಾರಿ ಸ್ಥಳದ ಕಲ್ಲುಗುಡ್ಡೆ-ಕೊಣಾಜೆ ಸಡಕ್ ರಸ್ತೆಯ ಬದಿಯಲ್ಲಿ ಸರ್ವೇ ನಂಬ್ರ 74/4ಎಪಿ1 ರಲ್ಲಿ 1 ಎಕ್ರೆ 5 ಸೆಂಟ್ಸ್‌ ಸರಕಾರಿ ಸ್ಥಳವಿದ್ದು ಇದೇ ಜಾಗದಲ್ಲಿ ಅನಧಿಕೃತ ಕಟ್ಟಡ ಒಂದನ್ನು ಪಂಚಾಯಿತಿ ಅನುಮತಿ ಇಲ್ಲದೆ ದುರಸ್ತಿಗೊಳಿಸುತ್ತಿದ್ದು ಈ ಕಟ್ಟಡದಲ್ಲಿ ಮದ್ಯದಂಗಡಿ ತೆರೆಯಲಾಗುತ್ತದೆ ಎಂಬ ಬಗ್ಗೆ ಗ್ರಾಮದಲ್ಲಿ ವ್ಯಾಪಕ ಪ್ರಚಾರಗಳು ವ್ಯಕ್ತವಾಗುತ್ತಿದೆ. ಶಾಂತಿ ಸೌಹಾರ್ದತೆಯೊಂದಿಗೆ ಎಲ್ಲಾ ಜಾತಿ ಜನಾಂಗದವರು ಒಗ್ಗಟ್ಟಿನಿಂದ ಬಾಳುತ್ತಿರುವ ಕಲ್ಲುಗುಡ್ಡೆ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅನುಮತಿ ನೀಡದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಅಬಕಾರಿ ಅಧೀಕ್ಷಕರಿಗೆ ಸೇರಿದಂತೆ ಎಲ್ಲಾ ಇಲಾಖೆಗಳಿಗೆ ಹಾಗೂ ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಆದರೂ ಗ್ರಾಮದಲ್ಲಿ ಸರಕಾರಿ ಜಾಗದಲ್ಲಿಯೇ ಅನಧಿಕೃತ ಕಟ್ಟಡದಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ನಮ್ಮ ಮನವಿಗೆ ವಿರುದ್ದವಾಗಿ ನಡೆದುಕೊಂಡರೆ ಗ್ರಾಮಸ್ಥರನ್ನು ಒಗ್ಗೂಡಿಸಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Also Read  ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಶಿಕ್ಷಕರಿಂದ ಪಾಠ!➤ ಮಕ್ಕಳ ಕಲಿಕಾ ಕೇಂದ್ರವಾದ ದೇವಸ್ಥಾನ, ಚರ್ಚ್, ಮಸೀದಿ, ಮಂದಿರಗಳು

error: Content is protected !!
Scroll to Top