ನಾಳೆ ಕಡಬ, ನೆಲ್ಯಾಡಿ, ಸುಬ್ರಹ್ಮಣ್ಯ, ಸವಣೂರು ಭಾಗಗಳಲ್ಲಿ ವಿದ್ಯುತ್ ನಿಲುಗಡೆ

(ನ್ಯೂಸ್ ಕಡಬ) newskadaba.com ಕಡಬ, ಜೂ.20. ತುರ್ತು ಕಾಮಗಾರಿ ನಿಮಿತ್ತ ಜೂನ್ 21 ಗುರುವಾರದಂದು ಕಡಬ ಮೆಸ್ಕಾಂ ವಿಭಾಗದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರ ತನಕ ವಿದ್ಯುತ್ ನಿಲುಗಡೆಗೊಳಿಸಲಾಗುವುದು ಎಂದು ಕಡಬ ಮೆಸ್ಕಾಂ ಎಇಇ ಸಜಿ ಕುಮಾರ್ ತಿಳಿಸಿದ್ದಾರೆ.

ಎಚ್‌ಟಿ ಹಾಗೂ ಎಲ್‌ಟಿ ವಿದ್ಯುತ್ ಲೈನ್ ದುರಸ್ತಿ ಹಾಗೂ ಲೈನ್‌ನಡಿಯಲ್ಲಿ ಮರ ಕಟ್ಟಿಂಗ್, ಮರದ ಗೆಲ್ಲು ಕಟ್ಟಿಂಗ್ ಸೇರಿದಂತೆ ತುರ್ತು ದುರಸ್ತಿ ಕಾರ್ಯಕ್ರಮ ಇರುವುದರಿಂದ ಕಡಬ ಮೆಸ್ಕಾಂ ವಿಭಾಗದ ಕಡಬ ನೆಲ್ಯಾಡಿ, ಸುಬ್ರಹ್ಮಣ್ಯ, ಸವಣೂರು ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಗೊಳ್ಳಲಿದೆ. ಗ್ರಾಹಕರು ಸಹಕರಿಸಬೇಕೆಂದು ಕಡಬ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಕಟಣೆ ತಿಳಿಸಿದೆ.

Also Read  ಅಸ್ಸಾಂ: ಫೆ. 06ರಿಂದ 10ರವರೆಗೆ ರಾ.ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ➤ ಕರ್ನಾಟಕ ತಂಡದ ತರಬೇತುದಾರರಾಗಿ "ಕಡಬದ ಅಬ್ದುಲ್ ಖಾದರ್" ಆಯ್ಕೆ

error: Content is protected !!
Scroll to Top