
(ನ್ಯೂಸ್ ಕಡಬ) newskadaba.com, ನ 05. ಮಂಗಳೂರಿನಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ನಿಷೇಧಿತ ಎಲ್ಎಸ್ಡಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ವಶಪಡಿಸಿಕೊಂಡ ಸುಮಾರು 100 ಎಲ್ಎಸ್ಡಿ ಸ್ಟ್ರಿಪ್ಗಳು ಹಾಗೂ 3 ಮೊಬೈಲ್ ಫೋನ್ಗಳ ಒಟ್ಟು ಮೌಲ್ಯ ಅಂದಾಜು 3.35 ಲಕ್ಷ ರೂ. ಆಗಿದೆ.
ಬೆಂಗಳೂರಿನಿಂದ ಡ್ರಗ್ಸ್ ತಂದು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಪಡೀಲ್ ರೈಲ್ವೆ ಸೇತುವೆ ಬಳಿ ಕಾರ್ಯಾಚರಣೆ ನಡೆಸಿದ್ದಾರೆ.ಪಡೀಲ್ ಅಲಾಪೆ ನಿವಾಸಿ (ಈತನ ವಿರುದ್ಧ ಈಗಾಗಲೇ ಉತ್ತರ ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ಮಾರಾಟ ಪ್ರಕರಣ ದಾಖಲಿದೆ).
ಉರ್ವಾ ಸ್ಟೋರ್ ನಿವಾಸಿ (ಈತನ ವಿರುದ್ಧ ಬರ್ಕೆ ಮತ್ತು ಉರ್ವಾ ಠಾಣೆಗಳಲ್ಲಿ ಹಲ್ಲೆ, ಕೊಲೆ ಯತ್ನ, ಗಾಂಜಾ ಮಾರಾಟ ಸೇರಿದಂತೆ 9 ಕ್ರಿಮಿನಲ್ ಪ್ರಕರಣಗಳಿವೆ).ನವೆಂಬರ್ 3 ರಂದು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಈ ಬಂಧನ ನಡೆದಿದ್ದು, ಕಂಕನಾಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಜಾಲದಲ್ಲಿ ಇನ್ನುಳಿದವರೂ ಭಾಗಿಯಾಗಿರುವ ಶಂಕೆ ಇದ್ದು, ತನಿಖೆ ಮುಂದುವರೆದಿದೆ.




