
(ನ್ಯೂಸ್ ಕಡಬ) newskadaba.com, ನ 04. ಗೃಹಲಕ್ಷ್ಮೀ ಯೋಜನೆಯ ಮರುಪರಿಶೀಲನೆ ಹೆಸರಿನಲ್ಲಿ ಮಹಿಳಾ ಫಲಾನುಭವಿಗಳಿಂದ OTP, ಆಧಾರ್ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಕೇಳಿ ವಂಚಿಸುತ್ತಿರುವ ನಕಲಿ ಜಾಲದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಸುಮಾರು 1.22 ಕೋಟಿ ಅರ್ಹ ಮಹಿಳೆಯರು ಯೋಜನೆಯ ಫಲಾನುಭವಿಗಳಾಗಿದ್ದು, ಸರ್ಕಾರ ಇದುವರೆಗೆ ₹79,404 ಕೋಟಿಗೂ ಅಧಿಕ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿದೆ.
ಸದ್ಯ ಯಾವುದೇ ಮರುಪರಿಶೀಲನೆ ಅಥವಾ ವಿಶೇಷ ಸಮೀಕ್ಷೆ ಆರಂಭವಾಗಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಗೃಹಲಕ್ಷ್ಮೀ ಹೆಸರಿನಲ್ಲಿ ನಕಲಿ ಆ್ಯಪ್ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ₹30 ಸಾವಿರದಿಂದ ₹3 ಲಕ್ಷದವರೆಗೆ ಸಾಲ ನೀಡುವ ಸುಳ್ಳು ಸಂದೇಶಗಳನ್ನು ಹರಡಲಾಗುತ್ತಿದೆ.
ಫಲಾನುಭವಿಗಳು ಎಚ್ಚರಿಕೆ ವಹಿಸಿ:
ಅಪರಿಚಿತರಿಗೆ OTP ಹಂಚಿಕೊಳ್ಳಬೇಡಿ.
ಆಧಾರ್ ಮತ್ತು ಬ್ಯಾಂಕ್ ವಿವರ ನೀಡಬೇಡಿ.
ಗೃಹಲಕ್ಷ್ಮೀ ಹೆಸರಿನ ನಕಲಿ ಆ್ಯಪ್ಗಳನ್ನು ಡೌನ್ಲೋಡ್ ಮಾಡಬೇಡಿ.
ಸುಳ್ಳು ಸಾಲದ ಜಾಹೀರಾತುಗಳನ್ನು ನಂಬಬೇಡಿ.




