ಕುಂತೂರು: ಕಳ್ಳರ ಕೈಚಳಕ ► ಮೂರು ಅಂಗಡಿಗಳ ಒಳ ನುಗ್ಗಿದ ಕಳ್ಳರು



(ನ್ಯೂಸ್ ಕಡಬ) newskadaba.com ಕಡಬ, ಜೂ.12. ಅಂಗಡಿಗಳ ಬೀಗ ಒಡೆದು ಒಳನುಗ್ಗಿರುವ ಕಳ್ಳರು ಚಿಲ್ಲರೆ ಹಣವನ್ನು ದೋಚಿದ ಘಟನೆ ಠಾಣಾ ವ್ಯಾಪ್ತಿಯ ಕುಂತೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ.







ಪೆರಾಬೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ದನ ಶೆಟ್ಟಿ ಎಂಬವರಿಗೆ ಸೇರಿದ ದಿನಸಿ ಅಂಗಡಿಯ ಒಳ ನುಗ್ಗಿರುವ ಕಳ್ಳರು ಒಂದು ಮೊಬೈಲ್ ಹಾಗೂ ಹಣವನ್ನು ಕದ್ದೊಯ್ದಿದ್ದಾರೆ. ಪಕ್ಕದಲ್ಲೇ ಇದ್ದ ಮೇಘನಾಥ ಎಂಬವರಿಗೆ ಸೇರಿದ ಮೊಬೈಲ್ ಸೆಂಟರ್ ನಿಂದ ಹಣವನ್ನು ದೋಚಿದ್ದಾರೆ. ದಯಾನಂದ ಎಂಬವರ ಗೂಡಂಗಡಿಯಿಂದಲೂ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






error: Content is protected !!
Scroll to Top