
(ನ್ಯೂಸ್ ಕಡಬ) newskadaba.com, ಅ 26 . ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಪಶ್ಚಿಮ ಬಂಗಾಳದ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಬ್ರಹ್ಮಾವರದ ಸಾಲಿಗ್ರಾಮ ಎಂಬಲ್ಲಿ ನಡೆದಿದೆ. ಮೃತರನ್ನು ಪಶ್ಚಿಮ ಬಂಗಾಲ ರಾಜ್ಯದ ಮಾಲ್ದಾ ಜಿಲ್ಲೆಯ ಕೆಂಡಪುಕುರದ ದೇಬಾಶಿಶ್ ದಾಸ್(18) ಎಂದು ಗುರುತಿಸಲಾಗಿದೆ.
ಇವರು ಕಟ್ಟಡದ 8ನೇ ಮಹಡಿಯಲ್ಲಿ ಪ್ಲಂಬಿಂಗ್ ಡಕ್ನಲ್ಲಿ ಕೆಲಸ ಮಾಡುತ್ತಿದ್ದು, ಈ ವೇಳೆ ಅವರು ಅಕಸ್ಮಿಕವಾಗಿ ಕಾಲು ಜಾರಿ 8 ನೇ ಮಹಡಿ ಮೇಲಿನಿಂದ ನೆಲಕ್ಕೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




