ಕರ್ನಾಟಕದ 4 ವಿಧಾನ ಪರಿಷತ್‌ ಕ್ಷೇತ್ರಗಳಿಗೆ ಮತದಾನ: ಕೆಲವೆಡೆ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ಜಟಾಪಟಿ, ಅ.27ಕ್ಕೆ ಫಲಿತಾಂಶ

(ನ್ಯೂಸ್‌ ಕಡಬ) newskadaba.com, ಅ. 24 ಆಗ್ನೇಯ ಪದವೀಧರರ ಕ್ಷೇತ್ರ, ಪಶ್ಚಿಮ ಪದವೀಧರರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರ.ಒಟ್ಟು 43 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, ಬಿಜೆಪಿ ಮೊದಲ ಮೂರು ಕ್ಷೇತ್ರಗಳಲ್ಲಿ ಹಾಗೂ ಮೈತ್ರಿ ಪಕ್ಷ ಜೆಡಿಎಸ್‌ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಣಕ್ಕಿಳಿದಿವೆ.

ಮತದಾನವು ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡರೂ, ಬೆಂಗಳೂರಿನ ನಾಗರಭಾವಿ, ಆನೇಕಲ್ ಹಾಗೂ ಗದಗದಲ್ಲಿ ಬಿಜೆಪಿ-ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಸಂಘರ್ಷ ಮತ್ತು ವಾಗ್ವಾದಗಳು ನಡೆದವು. ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

75 ಸದಸ್ಯ ಬಲದ ಪರಿಷತ್ತಿನಲ್ಲಿ ಪ್ರಸ್ತುತ ಕಾಂಗ್ರೆಸ್ 38, ಬಿಜೆಪಿ-ಜೆಡಿಎಸ್‌ ಮೈತ್ರಿ 30 ಮತ್ತು 1 ಸ್ವತಂತ್ರ ಸದಸ್ಯರಿದ್ದಾರೆ. 5 ಸ್ಥಾನಗಳು ಖಾಲಿ ಇವೆ.ಚುನಾವಣೆಯ ಅಧಿಕೃತ ಫಲಿತಾಂಶವು ಅಕ್ಟೋಬರ್ 27ರ ಮಂಗಳವಾರ ಪ್ರಕಟಗೊಳ್ಳಲಿದೆ.

Scroll to Top