ಒಡಿಶಾ: ವಾರದ ಹಿಂದೆ ಜನಿಸಿದ್ದ ಅಪರೂಪದ ಸಯಾಮಿ ಅವಳಿ ಗಂಡು ಶಿಶುಗಳು ನಿಧನ

(ನ್ಯೂಸ್‌ ಕಡಬ) newskadaba.com, ಅ.19. : ಒಡಿಶಾದಲ್ಲಿ ವಾರದ ಹಿಂದೆ ಜನಿಸಿದ್ದ ಅಪರೂಪದ ಸಯಾಮಿ ಅವಳಿ ಗಂಡು ಶಿಶುಗಳು ನಿಧನಹೊಂದಿವೆ.ಈ ಅವಳಿಗಳಿಗೆ ಎರಡು ಪ್ರತ್ಯೇಕ ತಲೆಗಳು ಮತ್ತು ಬೆನ್ನುಹುರಿಗಳಿದ್ದವು; ಆದರೆ ಒಂದೇ ಹೃದಯ, ಯಕೃತ್ತು ಹಾಗೂ ದೇಹವನ್ನು ಹೊಂದಿದ್ದು, ಕೇವಲ ಒಂದು ಜೋಡಿ ಕೈ-ಕಾಲುಗಳಿದ್ದವು.ಕಂಧಮಾಲ್ ಜಿಲ್ಲೆಯ ತುಮುಡಿಬಂಧ ವ್ಯಾಪ್ತಿಯ ದಿನಗೂಲಿ ಕಾರ್ಮಿಕ ದಂಪತಿಗೆ ಅಕ್ಟೋಬರ್ 11 ರಂದು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ 2.25 ಕೆಜಿ ತೂಕದ ಈ ಶಿಶು ಜನಿಸಿತ್ತು.

ಜನನದ ಮರುದಿನವೇ ಉಸಿರಾಟದ ತೀವ್ರ ತೊಂದರೆ ಕಾಣಿಸಿಕೊಂಡಿದ್ದರಿಂದ ವೈದ್ಯರು ನಿಗದಿಪಡಿಸಿದ್ದ ಜೀವ ಉಳಿಸುವ ಶಸ್ತ್ರಚಿಕಿತ್ಸೆ ಅಸಾಧ್ಯವಾಯಿತು. ಕೊನೆಗೆ ಶನಿವಾರ ಶಿಶು ಸಾವನ್ನಪ್ಪಿತು.ಮಗುವಿನ ಸಾವಿನ ಬಳಿಕ ಮೃತದೇಹ ಕೊಂಡೊಯ್ಯಲು ಕುಟುಂಬದವರು ನಿರಾಕರಿಸಿದ ಹಿನ್ನೆಲೆಯಲ್ಲಿ, ಗಂಜಾಂ ಜಿಲ್ಲಾಡಳಿತ ಮತ್ತು ಆಸ್ಪತ್ರೆ ಅಧಿಕಾರಿಗಳು ಕೌನ್ಸೆಲಿಂಗ್ ನಡೆಸಿ, ಸರ್ಕಾರಿ ಶವವಾಹನದ ಮೂಲಕ ಹುಟ್ಟೂರಿಗೆ ಕಳುಹಿಸಿಕೊಟ್ಟರು.

Scroll to Top