ಪಡಿತರ ಚೀಟಿ ಇ-ಕೆವೈಸಿ ಗಡುವು ವಿಸ್ತರಣೆ: ನವೆಂಬರ್ 10ರವರೆಗೆ ಅವಕಾಶ!

(ನ್ಯೂಸ್‌ ಕಡಬ) newskadaba.com, ಅ.19.  ಪಡಿತರ ಚೀಟಿ ಫಲಾನುಭವಿಗಳು ತಮ್ಮ ಇ-ಕೆವೈಸಿ ದೃಢೀಕರಿಸಲು ಇದ್ದ ಗಡುವನ್ನು ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ನವೆಂಬರ್ 10ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.ಈ ಹಿಂದೆ ಅಕ್ಟೋಬರ್ 20ರವರೆಗೆ ಇದ್ದ ಕೊನೆಯ ದಿನಾಂಕವನ್ನು ಈಗ ನವೆಂಬರ್ 10ಕ್ಕೆ ವಿಸ್ತರಿಸಲಾಗಿದೆ.

ಒಂದು ವರ್ಷಕ್ಕೂ ಮೇಲ್ಪಟ್ಟವರು, ಇದುವರೆಗೆ ಒಮ್ಮೆಯೂ ಮಾಡಿಸದವರು (3,82,362 ಫಲಾನುಭವಿಗಳು) ಹಾಗೂ 5 ವರ್ಷ ಮೇಲ್ಪಟ್ಟು ಇ-ಕೆವೈಸಿ ಮಾಡಿಸಿದವರು ಕಡ್ಡಾಯವಾಗಿ ದೃಢೀಕರಿಸಬೇಕು.ಫಲಾನುಭವಿಗಳು ಅನ್ನ ಸೇವೆ ಮೊಬೈಲ್ ಅಪ್ಲಿಕೇಶನ್ ಮೂಲಕ ಸ್ವತಃ ಅಥವಾ ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ‘AHARA’ ತಂತ್ರಾಂಶದ ಮೂಲಕ ಇ-ಕೆವೈಸಿ ಮಾಡಿಕೊಳ್ಳಬಹುದು.

ಹೊರರಾಜ್ಯಗಳಲ್ಲಿ ಕೆಲಸ ನಿಮಿತ್ತ ನೆಲೆಸಿರುವ ಕನ್ನಡಿಗರಿಗಾಗಿ ‘ಅನ್ನ ಸೇವೆ’ ಆ್ಯಪ್ ಸೇವೆಯನ್ನು ದೇಶಾದ್ಯಂತ ವಿಸ್ತರಿಸಲಾಗಿದ್ದು, ಅಲ್ಲಿಂದಲೇ ಇ-ಕೆವೈಸಿ ಪೂರ್ಣಗೊಳಿಸಬಹುದಾಗಿದೆ.

Scroll to Top