ಲಕ್ಷಾಂತರ ಅರ್ಜಿಗಳು ಬಾಕಿ: ಹೊಸ ಗ್ಯಾಸ್ ಸಂಪರ್ಕ ವಿತರಣೆಗೆ ಕೇಂದ್ರದ ಅನುಮತಿ ಕೋರಿದ ಕರ್ನಾಟಕ ಸರ್ಕಾರ

(ನ್ಯೂಸ್‌ ಕಡಬ) newskadaba.com, ಅ. 17 . ರಾಜ್ಯದಲ್ಲಿ ಹೊಸ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳ ವಿತರಣೆಯನ್ನು ತಕ್ಷಣವೇ ಪುನರಾರಂಭಿಸಲು ಅನುಮತಿ ಕೋರಿ ರಾಜ್ಯ ಸರ್ಕಾರವು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಪತ್ರ ಬರೆದಿದೆ. ಜಾಗತಿಕ ಬಿಕ್ಕಟ್ಟಿನ ನೆಪದಲ್ಲಿ ಹೊಸ ಗ್ಯಾಸ್ ಸಂಪರ್ಕಗಳ ವಿತರಣೆಯನ್ನು ಸುದೀರ್ಘಕಾಲದಿಂದ ಸ್ಥಗಿತಗೊಳಿಸಿರುವುದರಿಂದ ರಾಜ್ಯದಲ್ಲಿ ಲಕ್ಷಾಂತರ ಅರ್ಜಿಗಳು ಬಾಕಿ ಉಳಿದಿದ್ದು, ಜನಸಾಮಾನ್ಯರು ಪರದಾಡುವಂತಾಗಿದೆ.

ಜನಸಂಖ್ಯೆ ಹೆಚ್ಚಳ ಹಾಗೂ ನಗರೀಕರಣದಿಂದ ಹೊಸ ಕುಟುಂಬಗಳು, ಬಡವರು ಮತ್ತು ವಲಸಿಗರು ಅಡುಗೆ ಅನಿಲವಿಲ್ಲದೆ ಪರದಾಡುತ್ತಿದ್ದಾರೆ. ಅನಿವಾರ್ಯವಾಗಿ ಕಟ್ಟಿಗೆ, ಇದ್ದಿಲು ಹಾಗೂ ಸೀಮೆಎಣ್ಣೆಯಂತಹ ಸ್ವಚ್ಛವಲ್ಲದ ಇಂಧನಗಳ ಬಳಕೆಯಿಂದ ಮಹಿಳೆಯರು ಹಾಗೂ ಮಕ್ಕಳ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತಿದ್ದು, ಬೆಂಕಿ ಅವಘಡಗಳ ಅಪಾಯವೂ ಹೆಚ್ಚಿದೆ. ಹೀಗಾಗಿ, ಅರ್ಹ ಕುಟುಂಬಗಳಿಗೆ ಆದ್ಯತೆಯ ಮೇರೆಗೆ ಹೊಸ ಎಲ್‌ಪಿಜಿ ಸಂಪರ್ಕಗಳನ್ನು ಕಲ್ಪಿಸಲು ತೈಲ ಮಾರುಕಟ್ಟೆ ಕಂಪನಿಗಳಿಗೆ ಕೂಡಲೇ ನಿರ್ದೇಶನ ನೀಡಬೇಕೆಂದು ಆಗಿದೆ..

Scroll to Top