
(ನ್ಯೂಸ್ ಕಡಬ) newskadaba.com, ಅ. 17 . ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳು ಮತ್ತು ಖಾಸಗಿ ಸಂಸ್ಥೆಗಳಿಗೆ ಕರ್ನಾಟಕ ಸರ್ಕಾರ ಅತ್ಯಂತ ಪ್ರಮುಖ ಹಾಗೂ ಕಡ್ಡಾಯ ಆದೇಶವೊಂದನ್ನು ಹೊರಡಿಸಿದೆ.
ನವೆಂಬರ್ 1, 2026ರ ಕನ್ನಡ ರಾಜ್ಯೋತ್ಸವವು ಭಾನುವಾರ ಬಂದಿದ್ದರೂ ಸಹ, ಅಂದು ಯಾವುದೇ ವಿನಾಯಿತಿ ನೀಡದೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಆಚರಣೆ ಮಾಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ರಾಷ್ಟ್ರೀಯ ಹಬ್ಬಗಳು, ನಾಡಹಬ್ಬವಾದ ಕರ್ನಾಟಕ ರಾಜ್ಯೋತ್ಸವ ಹಾಗೂ ಇತರ ಪ್ರಮುಖ ಜಯಂತಿಗಳನ್ನು ನಿಗದಿತ ದಿನಗಳಂದೇ ರಾಜ್ಯದ ಎಲ್ಲ ಶಾಲೆಗಳಲ್ಲಿ ನಿಯಮಾನುಸಾರ ಕಡ್ಡಾಯವಾಗಿ ಆಚರಿಸಬೇಕು. ಅದರಂತೆ, ಈ ಬಾರಿ ರಜಾ ದಿನವಾದ ಭಾನುವಾರ ಬಂದರೂ ನವೆಂಬರ್ 1ರಂದು ಎಲ್ಲ ಶಾಲೆಗಳಲ್ಲೂ ಕನ್ನಡ ರಾಜ್ಯೋತ್ಸವ ಆಚರಣೆ ನಡಸಬೇಕು ಎಂದು ತಿಳಿಸಿದೆ.




