ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ಮುಂದೆ ಮೊಬೈಲ್‌ನಲ್ಲೇ ಲೈವ್ ಬಸ್ ಟ್ರ್ಯಾಕಿಂಗ್!

(ನ್ಯೂಸ್‌ ಕಡಬ) newskadaba.com, ಅ.12 . ಮೆಟ್ರೋ ರೈಲುಗಳಂತೆ ಇನ್ಮುಂದೆ ಬೆಂಗಳೂರಿನ ಬಿಎಂಟಿಸಿ ಬಸ್‌ಗಳನ್ನೂ ಮೊಬೈಲ್‌ನಲ್ಲೇ ಲೈವ್ ಆಗಿ ಟ್ರ್ಯಾಕ್ ಮಾಡುವ ಸೌಲಭ್ಯ ಶೀಘ್ರದಲ್ಲೇ ಲಭ್ಯವಾಗಲಿದೆ.ಸಾರ್ವಜನಿಕ ಸಾರಿಗೆ ಮಾಹಿತಿಯನ್ನು ಡಿಜಿಟಲ್ ವೇದಿಕೆಗಳೊಂದಿಗೆ ಹಂಚಿಕೊಳ್ಳಲು ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ಜೊತೆ ಬಿಎಂಟಿಸಿ ಮಾತುಕತೆ ನಡೆಸುತ್ತಿದ್ದು, ಈ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.

ಥರ್ಡ್-ಪಾರ್ಟಿ ಆ್ಯಪ್‌ಗಳ ಮೂಲಕ ಬಸ್ ಬರುವ ನಿಖರ ಸಮಯ ತಿಳಿಯಬಹುದು. ಇದರಿಂದ ಮೆಟ್ರೋ, ಬಸ್ ಹಾಗೂ ಆಟೋ-ಕ್ಯಾಬ್ ಪ್ರಯಾಣವನ್ನು ಒಟ್ಟಿಗೆ ಸುಲಭವಾಗಿ ಯೋಜಿಸಬಹುದು.ಈ ಹೊಸ ವ್ಯವಸ್ಥೆಯು ಈ ವರ್ಷದ ಅಂತ್ಯದೊಳಗೆ ಜಾರಿಗೆ ಬರುವ ನಿರೀಕ್ಷೆಯಿದೆ. ಪ್ರತಿದಿನ ಓಡಾಡುವ 40 ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.

Scroll to Top