ಕೆಎಂಎಫ್ ನಂದಿನಿ ಮಿಲ್ಕ್ ಪೌಡರ್ ಕಲಬೆರಕೆ ಆರೋಪ ಮುಕ್ತ

 ಎಫ್‌ಎಸ್‌ಎಸ್‌ಎಐ ವರದಿಯಿಂದ ಅಧಿಕೃತ ದೃಢೀಕರಣ

(ನ್ಯೂಸ್‌ ಕಡಬ) newskadaba.com, ಅ.12 . ನಂದಿನಿ ಮಿಲ್ಕ್ ಪೌಡರ್‌ನಲ್ಲಿ ಕಲಬೆರಕೆ ಮಾಡಲಾಗಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರ ಸೂಚನೆಯಂತೆ ಸೆಪ್ಟೆಂಬರ್ 26ರಂದು ಕೆಎಂಎಫ್ ಡೈರಿಗಳಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಎಫ್‌ಎಸ್‌ಎಸ್‌ಎಐ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು.

ಲ್ಯಾಬ್‌ ವರದಿ ಈಗ ಅಧಿಕೃತವಾಗಿ ಹೊರಬಂದಿದ್ದು, ನಂದಿನಿ ಮಿಲ್ಕ್ ಪೌಡರ್ ಸಂಪೂರ್ಣವಾಗಿ ಸುರಕ್ಷಿತ ಹಾಗೂ ಗುಣಮಟ್ಟದಿಂದ ಕೂಡಿದೆ ಎಂದು ಸ್ಪಷ್ಟಪಡಿಸಲಾಗಿದೆ.

Scroll to Top