
(ನ್ಯೂಸ್ ಕಡಬ) newskadaba.com, ಅ.12 . ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಉಡುಪಿಯ ಪ್ರಸಿದ್ಧ ಶಂಕರಪುರ ಮಲ್ಲಿಗೆ ಬೆಲೆ ಮುಗಿಲುಮುಟ್ಟಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಅಟ್ಟೆಗೆ ₹1,600 ತಲುಪಿದೆ.: ಕೇವಲ 15 ದಿನಗಳ ಹಿಂದೆ ಪ್ರತಿ ಅಟ್ಟೆಗೆ ರೂ. 240 ರಿಂದ 300 ರಷ್ಟಿದ್ದ ಬೆಲೆ, ಈಗ ಸುಮಾರು 5 ಪಟ್ಟು ಹೆಚ್ಚಾಗಿದೆ.
ದೇವಿ ಪೂಜೆಗೆ ಮಲ್ಲಿಗೆ ಅನಿವಾರ್ಯವಾಗಿರುವುದರಿಂದ ನವರಾತ್ರಿ ಹಾಗೂ ದಸರಾ ಉತ್ಸವದ ಸಮಯದಲ್ಲಿ ಹೂವಿಗೆ ಬೇಡಿಕೆ ವಿಪರೀತ ಹೆಚ್ಚಾಗಿದೆ.ಮಲ್ಲಿಗೆ ಬೆಳೆಗಾರರ ಸಂಘವು ಪ್ರತಿ ಅಟ್ಟೆಗೆ ರೂ. 570 ನಿಗದಿಪಡಿಸಿದ್ದರೂ, ತೆರೆದ ಮಾರುಕಟ್ಟೆಯಲ್ಲಿ ಬೆಲೆ ದುಪ್ಪಟ್ಟಾಗಿದೆ.
ಜಾಜಿ ಹೂವಿನ ಮುಕ್ತ ಮಾರುಕಟ್ಟೆ ಬೆಲೆಯು ಪ್ರತಿ ಅಟ್ಟೆಗೆ ₹800 ಕ್ಕೆ ಏರಿಕೆಯಾಗಿದೆ (ಬೆಳೆಗಾರರ ಸಂಘದ ದರ ರೂ. 160).




