ಏಷ್ಯನ್ ಗೇಮ್ಸ್ 2026: ಭಾರತಕ್ಕೆ ಮತ್ತೊಂದು ಪದಕ — ಶೂಟಿಂಗ್‌ನಲ್ಲಿ ಇಶಾ ಸಿಂಗ್‌ಗೆ ಬೆಳ್ಳಿ!

(ನ್ಯೂಸ್‌ ಕಡಬ) newskadaba.com, ಸೆ.28  .ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಇಶಾ ಸಿಂಗ್ ಅದ್ಭುತ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಸತತ 5 ನಿರ್ಣಾಯಕ ‘ಶೂಟ್-ಆಫ್’ ಸುತ್ತುಗಳನ್ನು ಎದುರಿಸಿದ ಇಶಾ, ಕೇವಲ ಒಂದು ಶಾಟ್ ಅಂತರದಿಂದ ಚಿನ್ನದ ಪದಕ ತಪ್ಪಿಸಿಕೊಂಡರು.ಈ ಬೆಳ್ಳಿ ಪದಕದೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.

ಚೀನಾದ ಶಿಯಾವೊ ಜಿಯಾರುಯಿಶುವಾನ್ ಚಿನ್ನದ ಪದಕ ಪಡೆದರೆ, ಉತ್ತರ ಕೊರಿಯಾದ ಕಿಮ್ ಹ್ಯೋನ್ ಸುಕ್ (34 ಅಂಕ) ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

Scroll to Top