ವ್ಯಕ್ತಿ ಮೇಲೆ ಚೂರಿಯಿಂದ ಭೀಕರ ಹಲ್ಲೆ: ಬಂಟ್ವಾಳ ಗ್ರಾಮಾಂತರ ಪೊಲೀಸರಿಂದ ತನಿಖೆ ಚುರುಕು

(ನ್ಯೂಸ್‌ ಕಡಬ) newskadaba.com,  ಸೆ.21 . ಬಂಟ್ವಾಳ ತಾಲೂಕಿನ ಧನುಪೂಜೆ ಸಮೀಪದ ಕಮ್ಮಾಜೆಯಲ್ಲಿ ರವಿವಾರ ಸಂಜೆ ವ್ಯಕ್ತಿಯೋರ್ವರಿಗೆ ಚೂರಿಯಿಂದ ಇರಿದ ಘಟನೆ ನಡೆದಿದೆ.ಕಮ್ಮಾಜೆಯ ಮೂಡಾಯಿಕೋಡಿ ನಿವಾಸಿ ಪ್ರಶಾಂತ್ ಚೂರಿ ಇರಿತಕ್ಕೊಳಗಾದವರಾಗಿದ್ದು, ಮೇಸ್ತ್ರೀ ಪ್ರಶಾಂತ್ ಎಂಬಾತನೇ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಗಂಭೀರವಾಗಿ ಗಾಯಗೊಂಡಿರುವ ಪ್ರಶಾಂತ್ ಅವರನ್ನು ತಕ್ಷಣವೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದು, ಚೂರಿ ಇರಿತಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

Scroll to Top