ದುನಿಯಾ ವಿಜಯ್ – ನಾಗರತ್ನ ವಿಚ್ಛೇದನ ಅರ್ಜಿ ಮಂಜೂರು



(ನ್ಯೂಸ್‌ ಕಡಬ) newskadaba.com,  ಸೆ. 04 ಸ್ಯಾಂಡಲ್‌ವುಡ್ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಮತ್ತು ಅವರ ಮೊದಲ ಪತ್ನಿ ನಾಗರತ್ನ ಅವರ 27 ವರ್ಷಗಳ ದಾಂಪತ್ಯ ಜೀವನಕ್ಕೆ ಕರ್ನಾಟಕ ಹೈಕೋರ್ಟ್ ಅಂತ್ಯಹಾಡಿದೆ.







ಕ್ರೌರ್ಯದ ಆಧಾರದ ಮೇಲೆ ಸಲ್ಲಿಕೆಯಾಗಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾ. ಡಿ.ಕೆ. ಸಿಂಗ್ ಹಾಗೂ ನ್ಯಾ. ಎಚ್. ಶಾಂತಿಭೂಷಣ್ ಅವರಿದ್ದ ವಿಭಾಗೀಯ ಪೀಠವು ವಿಚ್ಛೇದನ ಮಂಜೂರು ಮಾಡಿ ಆದೇಶಿಸಿದೆ.ಪತ್ನಿ ನಾಗರತ್ನ ಅವರಿಗೆ ಒನ್‌ಟೈಮ್ ಸೆಟಲ್‌ಮೆಂಟ್ (ಏಕಕಾಲದ ಪರಿಹಾರ) ರೂಪದಲ್ಲಿ ₹2 ಕೋಟಿ ಜೀವನಾಂಶವನ್ನು ನೀಡುವಂತೆ ಕೋರ್ಟ್ ನಟ ವಿಜಯ್ ಅವರಿಗೆ ನಿರ್ದೇಶನ ನೀಡಿದೆ.






ದಂಪತಿಯ ಮೂವರು ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ದುನಿಯಾ ವಿಜಯ್ ಅವರೇ ಹೊರಬೇಕೆಂದು ಹೈಕೋರ್ಟ್ ತಿಳಿಸಿದೆ.

error: Content is protected !!
Scroll to Top