ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ



(ನ್ಯೂಸ್ ಕಡಬ) newskadaba.com ಸೆ. 01. ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಯೋಜನೆಯಡಿ ನಾವೀನ್ಯತೆ (Innovation), ತಾರ್ಕಿಕ (Scholastic), ಕ್ರೀಡೆ (Sport), ಕಲೆ, ಸಾಂಸ್ಕೃತಿಕ ಮತ್ತು ಸಂಗೀತ (Art, Cultural, Music) ಕ್ಷೇತ್ರಗಳಲ್ಲಿ ಅಸಾಧರಣ ಸಾಧನೆ ಮಾಡಿದ 5 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಇಲಾಖಾ ವತಿಯಿಂದ ಜಿಲ್ಲಾ ಮಟ್ಟದ 2026-27ನೇ ಸಾಲಿನ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ಕ್ಷೇತ್ರದಲ್ಲಿ ಇಬ್ಬರು ಮಕ್ಕಳಂತೆ ಒಟ್ಟು 08 ಮಕ್ಕಳನ್ನು ಆಯ್ಕೆ ಮಾಡಿ, ಆಯ್ಕೆಯಾದ ಪ್ರತಿ ಮಗುವಿಗೆ – ತಲಾ ರೂ. 10,000/- ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಅರ್ಜಿ ಸಲ್ಲಿಸುವ ಮಕ್ಕಳ ವಯಸ್ಸು 5 ರಿಂದ 18 ವರ್ಷದೊಳಗಿರಬೇಕು. ಜನನ ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟಿರಬೇಕು. ಈ ಹಿಂದಿನ ವರ್ಷಗಳಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಮಕ್ಕಳಿಗೆ ಪುನಃ ಪ್ರಶಸ್ತಿ ನೀಡಲು ಅವಕಾಶವಿರುವುದಿಲ್ಲ.
ಈ ಪ್ರಶಸ್ತಿಗೆ ಆಯ್ಕೆ ಮಾಡುವಂತಹ ಮಕ್ಕಳು ಅಪ್ರತಿಮ ಸಾಧನೆ ಮಾಡಿರಬೇಕು. ಅಸಾಧಾರಣವೆಂದು ಇವರ ಸಾಧನೆಯನ್ನು ಸಮರ್ಥಿಸಲು ಪೂರಕ ದಾಖಲೆಗಳನ್ನು ಒದಗಿಸಬೇಕು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 20 ಕೊನೆಯ ದಿನ.







ಹೆಚ್ಚಿನ ಮಾಹಿತಿಗೆ ಅಥವಾ ಅರ್ಜಿ ನಮೂನೆಗೆ ನಗರದ ಬಿಜೈ ಮೆಸ್ಕಾಂ ಬಳಿ ಇರುವ ಜಿಲ್ಲಾ ಸ್ತ್ರೀಶಕ್ತಿ ಭವನದ 2ನೇ ಮಹಡಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಛೇರಿ (ದೂರವಾಣಿ ಸಂಖ್ಯೆ: 0824-2451254) ಸಂಪರ್ಕಿಸಬಹುದು ಎಂದು  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಕಟಣೆ ತಿಳಿಸಿದೆ.






error: Content is protected !!
Scroll to Top