ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬಿಗ್ ನ್ಯೂಸ್ 1,919 ಶಾಲೆಗಳಲ್ಲಿ 6 ತಿಂಗಳ ‘ಸ್ಪೋಕನ್ ಇಂಗ್ಲಿಷ್’ ತರಬೇತಿಗೆ ಸರ್ಕಾರ ಅನುಮೋದನೆ



(ನ್ಯೂಸ್‌ ಕಡಬ) newskadaba.com,  ಆ.31: ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಆಂಗ್ಲ ಭಾಷೆಯಲ್ಲಿ ಮಾತನಾಡುವ ಆತ್ಮವಿಶ್ವಾಸ ಬೆಳೆಸಲು ರಾಜ್ಯ ಸರ್ಕಾರ ಮುಂದಾಗಿದೆ. 1,919 ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 6 ತಿಂಗಳ ಕಾಲ ಸ್ಪೋಕನ್ ಇಂಗ್ಲಿಷ್ ತರಬೇತಿ ಆರಂಭವಾಗಲಿದೆ.







2026ರ ಸೆಪ್ಟೆಂಬರ್‌ನಿಂದ 2027ರ ಫೆಬ್ರವರಿವರೆಗೆ ಹಾಗೂ 1–3ನೇ, 4–7ನೇ ಮತ್ತು 8–10ನೇ ತರಗತಿ ಎಂದು ವಿದ್ಯಾರ್ಥಿಗಳನ್ನು 3 ಗುಂಪುಗಳಾಗಿ ವಿಂಗಡಿಸಿ ತರಬೇತಿ ನೀಡಲಾಗುತ್ತದೆ. ಪ್ರತಿ ತಂಡಕ್ಕೆ ವಾರಕ್ಕೆ 4 ಅವಧಿಗಳು ಇರಲಿವೆ.ಎಸ್‌ಡಿಎಂಸಿ ಮೂಲಕ ಇಂಗ್ಲಿಷ್ ಪದವಿ/ಸ್ನಾತಕೋತ್ತರ ಪದವಿ ಹೊಂದಿರುವ ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತದೆ.






ಆಯ್ಕೆಯಾಗುವ ಶಿಕ್ಷಕರಿಗೆ ತಿಂಗಳಿಗೆ ₹12,000 ಗೌರವಧನ ನಿಗದಿಪಡಿಸಲಾಗಿದ್ದು, ಈ ಯೋಜನೆಗೆ ₹19.67 ಕೋಟಿ ಅನುದಾನ ಮೀಸಲಿಟ್ಟಿದೆ.ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಅಳೆಯಲು ನವೆಂಬರ್ ಅಂತ್ಯ ಹಾಗೂ ಮಾರ್ಚ್ ಆರಂಭದಲ್ಲಿ ಎರಡು ಹಂತಗಳ ಮೌಲ್ಯಮಾಪನ ನಡೆಯಲಿದೆ.

 

error: Content is protected !!
Scroll to Top