ಜಾಗತಿಕ ಮಟ್ಟದಲ್ಲಿ ಸ್ಯಾಂಡಲ್ ವುಡ್ ಮಿಂಚು ಫೋರ್ಬ್ಸ್ ಇಂಡಿಯಾ ಪಟ್ಟಿಗೆ ಸೇರಿದ ರಿಷಬ್ ಶೆಟ್ಟಿ



(ನ್ಯೂಸ್ ಕಡಬ) newskadaba.com ಆ. 30. ಫೋರ್ಬ್ಸ್ ಇಂಡಿಯಾ ಬಿಡುಗಡೆ ಮಾಡಿರುವ ದೇಶದ ಪ್ರಮುಖ 100 ಗಣ್ಯರ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ನಟ, ನಿರ್ದೇಶಕ ಹಾಗೂ ಬರಹಗಾರ ಎಂಬ ಮೂರೂ ವಿಭಾಗಗಳಲ್ಲಿ ಆಯ್ಕೆಯಾದ ಏಕೈಕ ವ್ಯಕ್ತಿ ರಿಷಬ್ ಶೆಟ್ಟಿ.







ಅಲ್ಲು ಅರ್ಜುನ್, ಮೋಹನ್‌ ಲಾಲ್, ಮಮ್ಮುಟಿ, ದುಲ್ಕರ್ ಸಲ್ಮಾನ್, ಕಲ್ಯಾಣಿ ಪ್ರಿಯದರ್ಶನ್, ಆರ್. ಮಾಧವನ್, ರಜನೀಕಾಂತ್, ಅನಿರುದ್ಧ್ ರವಿಚಂದ್ರನ್, ಎ.ಆರ್. ರೆಹಮಾನ್, ರಾಮ್ ಚರಣ್ ಮತ್ತು ಸೂರ್ಯ ಕೂಡ ಈ ಪಟ್ಟಿಯಲ್ಲಿದ್ದಾರೆ.






ಅಮಿತಾಬ್ ಬಚ್ಚನ್, ಆಮಿರ್ ಖಾನ್, ಶಾರುಖ್ ಖಾನ್, ರಣ್ವೀರ್ ಸಿಂಗ್, ಆದಿತ್ಯ ಧರ್ ಹಾಗೂ ಯಾಮಿ ಗೌತಮ್ ಸ್ಥಾನ ಪಡೆದಿದ್ದಾರೆ. ಬರಹಗಾರರ ವಿಭಾಗದಲ್ಲಿ ಕನ್ನಡದ ಖ್ಯಾತ ಬರಹಗಾರ್ತಿ ಭಾನು ಮುಷ್ತಾಕ್ ಆಯ್ಕೆಯಾಗಿದ್ದಾರೆ.

error: Content is protected !!
Scroll to Top