ಮಂಗಳೂರು ರಸ್ತೆಗೆ ಇಳಿಯಲಿವೆ 100 ಎಲೆಕ್ಟ್ರಿಕ್ ಬಸ್‌ಗಳು



(ನ್ಯೂಸ್ ಕಡಬ) newskadaba.com ಆ. 27. ಕೇಂದ್ರ ಸರ್ಕಾರದ ಪಿಎಂ ಬಸ್ ಸೇವಾ ಯೋಜನೆಯಡಿ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗಕ್ಕೆ 100 ಎಲೆಕ್ಟ್ರಿಕ್ ಬಸ್‌ಗಳು ಹಂಚಿಕೆಯಾಗಿದ್ದು, ಮಂಗಳೂರು ನಗರ ಹಾಗೂ ಗ್ರಾಮಾಂತರದ ಜೊತೆಗೆ ಉಡುಪಿ, ಮೂಡುಬಿದಿರೆ ಮತ್ತು ಮಂಗಳೂರು ವಿಮಾನ ನಿಲ್ದಾಣ ಮಾರ್ಗಗಳಲ್ಲೂ ಬಸ್‌ ಗಳನ್ನು ಓಡಿಸಲು ಉದ್ದೇಶಿಸಲಾಗಿದೆ.







ಸದ್ಯದ ಯೋಜನೆಯಂತೆ ಮಂಗಳೂರು–ಉಡುಪಿ ಮಾರ್ಗಕ್ಕೆ 10, ಮೂಡುಬಿದಿರೆ ಮಾರ್ಗಕ್ಕೆ 10, ವಿಮಾನ ನಿಲ್ದಾಣಕ್ಕೆ 2 ಹಾಗೂ ಪಡೀಲ್‌ ಗೆ 4 ಬಸ್‌ಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ.






ಕುಂಟಿಕಾನ ಮತ್ತು ಬಾಳೆಪುಣಿಯಲ್ಲಿ ತಲಾ 50 ಬಸ್‌ ಗಳ ನಿಲುಗಡೆಗೆ ಅನುಕೂಲವಾಗುವಂತೆ ಡಿಪೋ ಹಾಗೂ ಚಾರ್ಜಿಂಗ್ ಸ್ಟೇಷನ್ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.

ಒಮ್ಮೆ ಚಾರ್ಜ್ ಮಾಡಿದರೆ ಎಲೆಕ್ಟ್ರಿಕ್ ಬಸ್‌ ಗಳು ಸುಮಾರು 150ರಿಂದ 200 ಕಿ.ಮೀ. ಸಂಚರಿಸಬಲ್ಲವು. ಪೂರ್ಣ ಚಾರ್ಜ್‌ಗೆ ಸುಮಾರು ಒಂದೂವರೆರಿಂದ ಎರಡು ಗಂಟೆ ಬೇಕಾಗುವುದರಿಂದ ಸದ್ಯ ಸ್ಥಳೀಯ ಹಾಗೂ ಸಮೀಪದ ಮಾರ್ಗಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

error: Content is protected !!
Scroll to Top