ವಲಯ ಮಟ್ಟದ ಕಬಡ್ಡಿ ಪಂದ್ಯಾಟ- ಕಡಬ ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ತಾಲೂಕು ಮಟ್ಟಕ್ಕೆ ಆಯ್ಕೆ



(ನ್ಯೂಸ್ ಕಡಬ) newskadaba.com ಕಡಬ, . 25.  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ , ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಪುತ್ತೂರು ಇವರ ವತಿಯಿಂದ ಶ್ರೀ ಭಾರತಿ ಶಾಲೆ, ಆಲಂಕಾರಿನಲ್ಲಿ ಸೋಮವಾರದಂದು ನಡೆದ 14ರ ವಯೋಮಾನದ ಬಾಲಕರ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕಡಬ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಎಂಟನೇ ತರಗತಿಯ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.







ವಿದ್ಯಾರ್ಥಿಗಳಾದ ನಿಶ್ಮಿತ್ ಪುರಿಯ, ಪೂರ್ಣೇಶ್ ಬಿ.ಕೆ, ಶೃಜನ್, ಕೆ.ಹೆಚ್.ವಿಖ್ಯಾತ್ ಕುಮಾರ್, ಭವಿಷ್.ಕೆ. ಪೂಜಿತ್, ತನುಷ್ ಐ.ಕೆ, ಜಿವಿನ್ ಹಾಗೂ ನಿಶಾನ್ ಪಿ. ತಂಡವನ್ನು ಪ್ರತಿನಿಧಿಸಿದ್ದರು. ಪಂದ್ಯಾವಳಿಯಲ್ಲಿ ಬೆಸ್ಟ್ ಹಿಡಿತಗಾರನಾಗಿ ಪೂರ್ಣೆಶ್ ಬಿ.ಕೆ. ಹಾಗೂ ಆಲ್ ರೌಂಡರ್ ಆಗಿ ನಿಶ್ಮಿತ್ ಪುರಿಯ ಗುರುತಿಸಿಕೊಂಡರು. ವಿದ್ಯಾರ್ಥಿಗಳ ಈ ಸಾಧನೆಗೆ ಉತ್ತಮ ಮಾರ್ಗದರ್ಶನ ಹಾಗೂ ತರಬೇತಿ ನೀಡಿದ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಲಕ್ಷ್ಮೀಶ ಗೌಡ ಆರಿಗ ಹಾಗೂ ಪ್ರಾಥಮಿಕ ವಿಭಾಗದ ಶಿಕ್ಷಕರಾದ ಶ್ರೀ ಶಿವಪ್ರಸಾದ್ ಕೆ. ಶ್ರೀ ನಾಗೇಶ್ ಮತ್ತು ಶ್ರೀ ಸನತ್ ಅವರ ಪರಿಶ್ರಮವೂ ಕಾರಣವಾಗಿದೆ.






error: Content is protected !!
Scroll to Top