ಕಡಬ: ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ಪತ್ತೆ



(ನ್ಯೂಸ್ ಕಡಬ) newskadaba.com ಕಡಬ, ಜೂ.02. ತನ್ನ ಇಬ್ಬರು ಮಕ್ಕಳೊಂದಿಗೆ ಗುರುವಾರದಂದು ಕುಂತೂರಿನಿಂದ ನಾಪತ್ತೆಯಾಗಿದ್ದ ಮಹಿಳೆಯನ್ನು ಕಡಬ ಪೊಲೀಸರು ಶನಿವಾರದಂದು ಪತ್ತೆ ಹಚ್ಚಿ ಕರೆತಂದಿದ್ದಾರೆ.







ಐತ್ತೂರು ಗ್ರಾಮದ ಮಾಯಿಪತ್ತೆಪಾಲು ನಿವಾಸಿ ಹುಕ್ರಪ್ಪ ಗೌಡ ಎಂಬವರ ಪುತ್ರಿ ಯಶೋಧಾ(37) ಎಂಬಾಕೆಯನ್ನು ಕುಂತೂರು ಗ್ರಾಮದ ಬಾಚಡ್ಕ‌ ಎಂಬಲ್ಲಿಗೆ ಸುಮಾರು ಹದಿನೈದು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಗುರುವಾರದಂದು ಆಕೆಯ ಮನೆಯವರು ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡು ಕುಂತೂರಿನ ಮನೆಗೆ ತೆರಳಿದ ಆಕೆಯ ಹೆತ್ತವರಿಗೆ ಬೀಗ ಹಾಕಿರುವುದು ಕಂಡುಬಂದಿದ್ದು, ಬಳಿಕ ಆಕೆ ಕೆಲಸ ನಿರ್ವಹಿಸುತ್ತಿದ್ದ ಕಡಬದ ಖಾಸಗಿ ಸಂಸ್ಥೆಯಲ್ಲಿ ವಿಚಾರಿಸಿದಾಗ ಅಲ್ಲಿಗೂ ಬಾರದೆ ಇದ್ದ ಹಿನ್ನೆಲೆಯಲ್ಲಿ ಸಂಬಂಧಿಕರಲ್ಲೆಲ್ಲಾ ಹುಡುಕಾಡಿದಾಗ ಆಕೆ ತನ್ನಿಬ್ಬರು ಮಕ್ಕಳಾದ ದೀಕ್ಷಾ(11) ಹಾಗೂ ರಕ್ಷಾ(10) ಳೊಂದಿಗೆ ನಾಪತ್ತೆಯಾಗಿರುವುದು ಕಂಡುಬಂದಿತ್ತು. ಈ ಬಗ್ಗೆ ಶುಕ್ರವಾರದಂದು ಆಕೆಯ ತಂದೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದ ಪೊಲೀಸರು ತಾಯಿ ಹಾಗೂ ಇಬ್ಬರು ಮಕ್ಕಳನ್ನು ಸುರತ್ಕಲ್ ನಲ್ಲಿ ಪತ್ತೆಹಚ್ಚಿ ಕರೆತರುವ ಮೂಲಕ ನಾಪತ್ತೆ ಪ್ರಕರಣಕ್ಕೆ ತೆರೆ ಬಿದ್ದಿದೆ.






error: Content is protected !!
Scroll to Top