(ನ್ಯೂಸ್ ಕಡಬ) newskadaba.com, ಆ.22 ಕೇಂದ್ರ ಸರ್ಕಾರ ಸಿಮ್ ಕಾರ್ಡ್ಗಳಿಗೆ ಸಂಬಂಧಿಸಿದಂತೆ ಮಹತ್ವದ ನಿಯಮವನ್ನು ಜಾರಿಗೆ ತಂದಿದೆ. ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಗರಿಷ್ಠ 9 ಸಿಮ್ ಕನೆಕ್ಷನ್ಗಳನ್ನು ಮಾತ್ರ ಹೊಂದಲು ಅವಕಾಶವಿದೆ. ನಿಗದಿತ ಮಿತಿಗಿಂತ ಹೆಚ್ಚಿನ ಸಿಮ್ಗಳನ್ನು ಹೊಂದಿರುವವರಿಗೆ ಹೊಸ ಸಿಮ್ ಕಾರ್ಡ್ ನೀಡದಂತೆ ದೂರಸಂಪರ್ಕ ಇಲಾಖೆ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ.
ಮಿತಿಗಿಂತ ಹೆಚ್ಚು ಸಿಮ್ ಕಾರ್ಡ್ಗಳನ್ನು ಹೊಂದಿರುವ ಗ್ರಾಹಕರ ಹೆಸರು ಮತ್ತು ಫೋಟೋಗಳನ್ನು ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್ಫಾರ್ಮ್ನಲ್ಲಿ ದಾಖಲಿಸಲಾಗುತ್ತದೆ. ನಿಗದಿತ ಮಿತಿಗಿಂತ ಹೆಚ್ಚಿನ ಸಿಮ್ಗಳು ಸಕ್ರಿಯವಾಗಿರುವುದು ಪತ್ತೆಯಾದರೆ, ಹೆಚ್ಚುವರಿ ಕನೆಕ್ಷನ್ಗಳ ಸಮಸ್ಯೆ ಬಗೆಹರಿಯುವವರೆಗೆ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
ಬಹುತೇಕರು ಬೇರೆ ಬೇರೆ ಟೆಲಿಕಾಂ ಆಪರೇಟರ್ಗಳಿಂದ ಸಿಮ್ ಕಾರ್ಡ್ಗಳನ್ನು ಪಡೆದುಕೊಂಡಿರುತ್ತಾರೆ. ಕೆಲವೊಮ್ಮೆ ತಮ್ಮ ಹೆಸರಿನಲ್ಲಿ ಎಷ್ಟು ಸಿಮ್ಗಳು ಸಕ್ರಿಯವಾಗಿವೆ ಎಂಬುದೇ ಬಳಕೆದಾರರಿಗೆ ತಿಳಿದಿರುವುದಿಲ್ಲ. ಇದನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ ‘ಸಂಚಾರ್ ಸಾಥಿ’ ಪೋರ್ಟಲ್ ಬಳಸಬಹುದು. ನಕಲಿ ಸಿಮ್ಗಳು, ವಂಚನೆ ಕರೆಗಳು ಹಾಗೂ ಮೊಬೈಲ್ ಆಧಾರಿತ ಸೈಬರ್ ವಂಚನೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಇಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಾಗಿ ಮೊಬೈಲ್ ಬಳಕೆದಾರರು ತಮ್ಮ ಹೆಸರಿನಲ್ಲಿ ಸಕ್ರಿಯವಾಗಿರುವ ಸಿಮ್ಗಳ ಬಗ್ಗೆ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.








