ಜಾಗತಿಕ ‘ಶಾಂಘೈ ರ್ಯಾಂಕಿಂಗ್’ನಲ್ಲಿ ಸಾಧನೆ ಮೆರೆದ ಮಾಹೆ: ವಿಶ್ವದ ಟಾಪ್ ಯೂನಿವರ್ಸಿಟಿಗಳ ಪಟ್ಟಿಗೆ ಸೇರ್ಪಡೆ



(ನ್ಯೂಸ್‌ ಕಡಬ) newskadaba.com,  ಆ.19: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಜಾಗತಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದೆ……..ಶಾಂಘೈ ರ್‍ಯಾಂಕಿಂಗ್ ಕನ್ಸಲ್ಟೆನ್ಸಿಯ 2026ರ ‘ಅಕಾಡೆಮಿಕ್ ರ್‍ಯಾಂಕಿಂಗ್ ಆಫ್ ವರ್ಲ್ಡ್ ಯೂನಿವರ್ಸಿಟೀಸ್’ (ARWU) ಪಟ್ಟಿಯಲ್ಲಿ ಮಾಹೆ 701-800ರ ಶ್ರೇಣಿಗೆ ಏರಿಕೆಯಾಗಿದೆ.







ARWU ಟ್ರ್ಯಾಕರ್ ವಿಶ್ಲೇಷಣೆಯಂತೆ ಮಾಹೆ ಜಾಗತಿಕವಾಗಿ 779ನೇ ಸ್ಥಾನದಲ್ಲಿದ್ದು, ಭಾರತದಲ್ಲಿ 7ನೇ ಅತ್ಯುತ್ತಮ ಸಂಸ್ಥೆಯಾಗಿ ಹೊರಹೊಮ್ಮಿದೆ.ಕಳೆದ ಬಾರಿಯ (801-900 ಶ್ರೇಣಿ) ಸಾಧನೆಗೆ ಹೋಲಿಸಿದರೆ ಜಾಗತಿಕ ಮಟ್ಟದಲ್ಲಿ 36 ಹಾಗೂ ರಾಷ್ಟ್ರೀಯ ಮಟ್ಟದಲ್ಲಿ 3 ಸ್ಥಾನಗಳ ಸುಧಾರಣೆ ಕಂಡಿದೆ.






ಶೈಕ್ಷಣಿಕ ಗುಣಮಟ್ಟ, ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳಿಗೆ ವಿವಿ ನೀಡುತ್ತಿರುವ ನಿರಂತರ ಪ್ರೋತ್ಸಾಹಕ್ಕೆ ಈ ಶ್ರೇಯಾಂಕ ಕನ್ನಡಿಯಾಗಿದೆ.ಈ ಪ್ರಗತಿಯು ಬೋಧಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಶ್ರಮದ ಫಲವಾಗಿದ್ದು, ಶಿಕ್ಷಣ ಮತ್ತು ಸಂಶೋಧನೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಪ್ರೇರಣೆಯಾಗಿದೆ ಎಂದು ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ತಿಳಿಸಿದ್ದಾರೆ.

error: Content is protected !!
Scroll to Top