ಚೊಕ್ಕಬೆಟ್ಟು: ವ್ಯಕ್ತಿಯನ್ನು ತುಂಡರಿಸಿ ಗೋಣಿಚೀಲದಲ್ಲಿ ತುಂಬಿಸಿಟ್ಟ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.02. ವ್ಯಕ್ತಿಯೋರ್ವರ ದೇಹವನ್ನು ತುಂಡರಿಸಿ ಗೋಣಿಚೀಲದಲ್ಲಿ ತುಂಬಿಸಿದ ಸ್ಥಿತಿಯಲ್ಲಿ ನಗರದ ಹೊರವಲಯದ ಸುರತ್ಕಲ್ ನಲ್ಲಿ ಶನಿವಾರದಂದು ಪತ್ತೆಯಾಗಿದೆ‌.

ಸುಮಾರು ಐವತ್ತರಿಂದ ಐವತ್ತೈದು ವರ್ಷ ಪ್ರಾಯದ ಗಂಡಸನ್ನು ಕೊಲೆ ಮಾಡಿ, ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ ಸುರತ್ಕಲ್ ಸಮೀಪದ ಚೊಕ್ಕಬೆಟ್ಟು ಎಂಬಲ್ಲಿನ ಮೋರಿಯೊಂದರ ಕೆಳಗೆ ಎಸೆದಿರಬಹುದೆಂದು ಶಂಕಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಸುರತ್ಕಲ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಅರಂತೋಡು: ಅನ್ವಾರುಲ್ ಹುದಾ ಅಸೋಸಿಯೇಷನ್ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆ

error: Content is protected !!