ಆಲಂಕಾರು: ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ► ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಆಲಂಕಾರು, ಜೂ.02. ಶಾಂತಿಮೊಗರು – ಆಲಂಕಾರು ರಸ್ತೆಯ ಕಜೆ ಎಂಬಲ್ಲಿ ಬೈಕ್‍ಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಶರವೂರು ಕಡೆಯಿಂದ ಮರ್ಧಾಳ ನಿವಾಸಿ ವಿನಯ್.ಬಿ.ಕೆ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಮತ್ತು ಆಲಂಕಾರಿನಿಂದ ಶರವೂರು ಕಡೆಗೆ ಸಹ ಸವಾರ ಶೇಖರರವರೊಂದಿಗೆ ರಘುನಾಥರವರು ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್‍ಗಳ ಮದ್ಯೆ ಢಿಕ್ಕಿ ಸಂಭವಿಸಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಢಿಕ್ಕಿಯ ರಭಸಕ್ಕೆ ಎರಡು ಬೈಕ್‍ಗಳು ಪರಸ್ಪರ ವಿರುದ್ಧ ದಿಕ್ಕಿಗೆ ತಿರುಗಿ ನಿಂತಿದ್ದು ಸಂಪೂರ್ಣ ಗುಜು ನುಜ್ಜಾಗಿದೆ. ನಗ್ರಿ ನಿವಾಸಿ ರಘುನಾಥರವರ ತಲೆ, ಕಾಲು ಹಾಗೂ ಕೈಗಳಿಗೆ ಗಂಭೀರ ಸ್ವರೂಪದ ಗಾಯಗೊಂಡಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತಿಬ್ಬರಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಜಮಾಯಿಸಿ 108 ರ ಮೂಲಕ ತಕ್ಷಣ ಆಸ್ಪತ್ರಗೆ ಸಾಗುವಲ್ಲಿ ಸಹಕರಿಸಿದರು.

Also Read  ಸಬ್ ಇನ್ ಸ್ಪೆಕ್ಟರ್ ಹುದ್ದೆಗಳಿಗೆ ಉಚಿತ ತರಬೇತಿ- ಅರ್ಜಿ ಆಹ್ವಾನ

error: Content is protected !!
Scroll to Top