(ನ್ಯೂಸ್ ಕಡಬ) newskadaba.com, ಆ.12 :ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶಾದ್ಯಂತ ಖಾಲಿ ಇರುವ 9,124 ಜೂನಿಯರ್ ಅಸೋಸಿಯೇಟ್ ಭರ್ತಿಗೆ ಆನ್ಲೈನ್ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.ವೇತನ ಶ್ರೇಣಿ ಪ್ರತಿ ತಿಂಗಳಿಗೆ ₹24,050 ರಿಂದ ₹64,480..
ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು.ಕನಿಷ್ಠ 20 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 28 ವರ್ಷ ಮೀರಬಾರದು.OBC / BC ಅಭ್ಯರ್ಥಿಗಳಿಗೆ 3 ವರ್ಷಗಳು,SC / ST ಅಭ್ಯರ್ಥಿಗಳಿಗೆ 5 ವರ್ಷಗಳು,PwBD (ಸಾಮಾನ್ಯ) ಅಭ್ಯರ್ಥಿಗಳಿಗೆ 10 ವರ್ಷಗಳು.UR, EWS ಹಾಗೂ OBC ಅಭ್ಯರ್ಥಿಗಳಿಗೆ ₹750 ಹಾಗೂ SC, ST ಮತ್ತು PwBD ಅಭ್ಯರ್ಥಿಗಳಿಗೆ ಶುಲ್ಕವಿಲ್ಲ (ಉಚಿತ)ಪಾವತಿ ವಿಧಾನವು ಆನ್ಲೈನ್ ಮೂಲಕವಾಗಿದೆ.
ಬೇಕಾಗಿರುವ ದಾಖಲೆಗಳು ಸಕ್ರಿಯ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಗುರುತಿನ ಚೀಟಿ, ವಯಸ್ಸಿನ ಪುರಾವೆ, ಶೈಕ್ಷಣಿಕ ದಾಖಲೆಗಳು ಮತ್ತು ಇತ್ತೀಚಿನ ಭಾವಚಿತ್ರ…ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಆಗಸ್ಟ್ 2026.ಪೂರ್ವಭಾವಿ (Prelims) ಪರೀಕ್ಷೆ ದಿನಾಂಕ: 27 ಸೆಪ್ಟೆಂಬರ್ ಮತ್ತು 03 ಅಕ್ಟೋಬರ್ 2026.. ಮುಖ್ಯ (Mains) ಪರೀಕ್ಷೆ ದಿನಾಂಕ: 27 ನವೆಂಬರ್ 2026…….








