(ನ್ಯೂಸ್ ಕಡಬ) newskadaba.com, ಆ.08: ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಭಕ್ತಾದಿಗಳ ಅನುಕೂಲಕ್ಕಾಗಿ ಸರತಿ ಸಾಲಿನಲ್ಲೇ ಪ್ರಸಾದ ವಿತರಿಸುವ ನೂತನ ‘ಮೂವಿಂಗ್ ಟೇಬಲ್’ ವ್ಯವಸ್ಥೆಯನ್ನು ಪರಿಚಯಿಸಿದೆ.ಸುಮಾರು ₹10 ಲಕ್ಷ ವೆಚ್ಚದಲ್ಲಿ 7 ಮೀಟರ್ ಉದ್ದದ ಚಲಿಸುವ ಮೇಜನ್ನು ವಿನ್ಯಾಸಗೊಳಿಸಲಾಗಿದ್ದು, ಸಿಬ್ಬಂದಿ ಇದರ ಮೇಲೆ ಇರಿಸುವ ಪ್ರಸಾದವನ್ನು ಭಕ್ತರು ತಾವು ನಿಂತ ಸ್ಥಳದಲ್ಲೇ ಸುಲಭವಾಗಿ ಪಡೆದುಕೊಳ್ಳಬಹುದು.
ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ ಹಿನ್ನೆಲೆಯಲ್ಲಿ, ಈ ವ್ಯವಸ್ಥೆಯನ್ನು ವೈಕುಂಠಂ ಕ್ಯೂ ಕಾಂಪ್ಲೆಕ್ಸ್-1/2, ನಾರಾಯಣಗಿರಿ ಶೆಡ್ ಹಾಗೂ ಮುಖ್ಯ ಸರತಿ ಸಾಲುಗಳಿಗೂ ವಿಸ್ತರಿಸಲು TTD ನಿರ್ಧರಿಸಿದೆ.ಪ್ರಸಾದಕ್ಕಾಗಿ ಪ್ರತ್ಯೇಕ ಕೌಂಟರ್‌ಗಳಿಗೆ ತೆರಳುವ ಅಗತ್ಯ ತಪ್ಪಲಿದ್ದು, ಕ್ಯೂ ಕಾಂಪ್ಲೆಕ್ಸ್‌ನಲ್ಲಿ ಜನಸಂದಣಿ ನಿಯಂತ್ರಣ ಮತ್ತು ಸಮಯ ಉಳಿತಾಯಕ್ಕೆ ಇದು ನೆರವಾಗಲಿದೆ.








