ಸಿಇಟಿ ಫಲಿತಾಂಶ ಪ್ರಕಟ ► ಇಂಜಿನಿಯರಿಂಗ್ ನಲ್ಲಿ ಮಂಗಳೂರಿನ ನಾರಾಯಣ ಪೈಗೆ ದ್ವಿತೀಯ ರ‌್ಯಾಂಕ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.01. ಕರ್ನಾಟಕ ಸಿಇಟಿ ಫಲಿತಾಂಶವನ್ನು ಇಂದು ಮಧ್ಯಾಹ್ನ 1 ಗಂಟೆಗೆ  ಪ್ರಕಟಿಸಲಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಕೃತವಾಗಿ ಫಲಿತಾಂಶವನ್ನು ವೆಬ್‌ಸೈಟ್ ಗಳಲ್ಲಿ 3 ಗಂಟೆಗೆ ಪ್ರಕಟಿಸಲಿದೆ.

ಇಂಜಿನೀಯರಿಂಗ್ ವಿಭಾಗದಲ್ಲಿ ವಿಜಯಪುರದ ಎಕ್ಸಲೆನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿ ಶ್ರೀಧರ್ ದೊಡ್ಡಮನಿ ಪ್ರಥಮ ರ‌್ಯಾಂಕ್ ಪಡೆದುಕೊಂಡಿದ್ದು,   ದಕ್ಷಿಣ ಕನ್ನಡ ಜಿಲ್ಲೆಯ ಶಾರದಾ ಇಂಡಿಪೆಂಡೆಂಟ್‌ ಪಿಯು ಕಾಲೇಜಿನ ವಿದ್ಯಾರ್ಥಿ ನಾರಾಯಣ ಪೈ ದ್ವಿತೀಯ ರ‌್ಯಾಂಕ್ ಪಡೆದಿದ್ದಾರೆ. ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಪ್ರಿಲ್ ತಿಂಗಳಿನಲ್ಲಿ 2018ನೆ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಿತ್ತು. ಒಟ್ಟು 1,98,639 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಕೆಳಗಿನ ವೆಬ್‌ಸೈಟ್ ಗಳಲ್ಲಿ ಫಲಿತಾಂಶ ಪಡೆಯಬಹುದಾಗಿದೆ. http://kea.kar.nic.in
http://cet.kar.nic.in
http://karresults.nic.in

Also Read  ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

error: Content is protected !!
Scroll to Top