ಐಫೋನ್ ಬದಲು ಎಣ್ಣೆ ಪಾರ್ಸೆಲ್! ಫ್ಲಿಪ್‌ಕಾರ್ಟ್‌ಗೆ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

(ನ್ಯೂಸ್‌ ಕಡಬ) newskadaba.com,  ಜು.24: ಆನ್‌ಲೈನ್‌ನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಐಫೋನ್ ಆರ್ಡರ್ ಮಾಡಿದ ಗ್ರಾಹಕನಿಗೆ ಫೋನ್ ಬದಲಿಗೆ ‘ಗಡ್ಡ ಬೆಳೆಸುವ ಎಣ್ಣೆ’ಕಳುಹಿಸಿದ್ದ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ಗೆ ಮುಂಬೈನ ಗ್ರಾಹಕ ನ್ಯಾಯಾಲಯ ಭಾರಿ ದಂಡ ವಿಧಿಸಿದೆ.

ಏಪ್ರಿಲ್ 2023ರಲ್ಲಿ ಮುಂಬೈನ ಪೊವೈ ನಿವಾಸಿಯೊಬ್ಬರು ಫ್ಲಿಪ್‌ಕಾರ್ಟ್‌ನಲ್ಲಿ ₹1,11,793 ಮೌಲ್ಯದ ಆ್ಯಪಲ್ ಐಫೋನ್ 14 ಪ್ರೊ ಆರ್ಡರ್ ಮಾಡಿದ್ದರು. ಆದರೆ, ಪಾರ್ಸೆಲ್ ಓಪನ್ ಮಾಡಿದಾಗ ಅದರಲ್ಲಿ ಫೋನ್ ಬದಲು ಗಡ್ಡದ ಎಣ್ಣೆ ಬಾಟಲಿ ಪತ್ತೆಯಾಗಿತ್ತು.

ಗ್ರಾಹಕ ಸಾಕ್ಷ್ಯಗಳೊಂದಿಗೆ ದೂರು ನೀಡಿದರೂ, ಫ್ಲಿಪ್‌ಕಾರ್ಟ್ ಸೂಕ್ತ ಪರಿಹಾರ ನೀಡದೆ ಪದೇ ಪದೇ ದೂರನ್ನು ಕ್ಲೋಸ್ ಮಾಡಿತ್ತು. ಇದರಿಂದ ಗ್ರಾಹಕರು ನ್ಯಾಯಾಲಯದ ಮೊರೆ ಹೋದರು.ಫೋನ್‌ನ ಪೂರ್ಣ ಮೊತ್ತ ₹1,11,793 ಅನ್ನು 9% ವಾರ್ಷಿಕ ಬಡ್ಡಿಯೊಂದಿಗೆ ಹಿಂತಿರುಗಿಸಬೇಕು.

ಮಾನಸಿಕ ಕಿರುಕುಳಕ್ಕಾಗಿ ₹50,000 ಹಾಗೂ ಕಾನೂನು ವೆಚ್ಚವಾಗಿ ₹20,000 ಸೇರಿದಂತೆ ಒಟ್ಟು ₹70,000 ಪರಿಹಾರವನ್ನು 45 ದಿನಗಳೊಳಗೆ ಪಾವತಿಸಬೇಕು.

Scroll to Top